ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆ ಮುಂದುವರಿದಿದ್ದು, ಜೂ. 15ಹಾಗೂ 16ರಂದು ಕೇಂದ್ರ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಕಳೆದ 24ತಾಸುಗಳ ಕಾಲಾವಧಿಯಲ್ಲಿ ಬಿರುಸಿನ ಗಾಳಿ ಮಳೆಗೆ ಹೊಸದುರ್ಗದಲ್ಲಿ ಎಂಟು ಹಾಗೂ ಮಂಜೇಶ್ವರದಲ್ಲಿ ಮೂರು ಮನೆಗಳಿಗೆ ಆಂಶಿಕ ಹಾನಿಯುಂಟಾಗಿದೆ.
ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನೀರುತುಂಬಿಕೊಳ್ಳುವ ತಗ್ಗು ಪ್ರದೇಶ ಹಾಗೂ ಮಣ್ಣುಕುಸಿತವುಂಟಾಗುವ ಮಲೆನಾಡು ಪ್ರದೇಶ, ಸಮುದ್ರಕೊರೆತ ಕಂಡುಬರುತ್ತಿರುವ ಪ್ರದೇಶದ ಜನತೆ ಜಾಗ್ರತೆ ಪಾಲಿಸುವಂತೆ ಸೂಚಿಸಲಾಗಿದೆ. ನದಿ ದಡ, ಅಣೆಕಟ್ಟು ಪ್ರದೇಶದ ಆಸುಪಾಸು ವಾಸಿಸುವವರು, ಮೀನುಹಿಡಿಯಲು ಹಾಗೂ ಇತರ ಅಗತ್ಯಗಳಿಗಾಗಿ ನದಿನೀರಿಗಿಳಿಯದಂತೆ ಸೂಚಿಸಲಾಗಿದೆ. ಯಾವುದೇ ಸಮಸ್ಯೆಗಳುಂಟಾದಲ್ಲಿ ತುರ್ತು ಸೇವಾ ಕೇಂದ್ರ ಹಾಗೂ ನಿಯಂತ್ರಣ ಕೊಠಡಿಗಳಿಗೆ ಕರೆಮಾಡುವಂತೆ ಪ್ರಕಟಣೆ ತಿಳಿಸಿದೆ.
ತುರ್ತು ಸೇವಾ ಕೇಂದ್ರ-04994 257700, ಕಾಸರಗೋಡು-04994 230021, ಮಂಜೇಶ್ವರ- 0499 8244044, ಹೊಸದುರ್ಗ-04672204042, 0467 2206222, ವೆಳ್ಳರಿಕುಂಟು-0467 2242320.