ವಿಶ್ವಸಂಸ್ಥೆ: ಅಂತಾರಾಷ್ಟ್ರೀಯ ಸಮುದಾಯ ಪಾಕಿಸ್ತಾನ ಉಗ್ರ ಸಂಘಟನೆ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಬೇಕೆಂದು ಭಾರತ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದೆ.
ಉಗ್ರ ಸಂಘಟನೆ ವಿರುದ್ಧ ಪರಿಣಾಮಕಾರಿ ಹಾಗೂ ಮಾರ್ಪಡಿಸಲಾಗದ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಪಾಕಿಸ್ತಾನವನ್ನು ವಿಶ್ವಸಮುದಾಯ ಆಗ್ರಹಿಸುವುದಕ್ಕೆ ಇದು ಸೂಕ್ತ ಸಮಯವಾಗಿದ್ದು, ಪಾಕಿಸ್ತಾನ ತಾನು ಮಾಡಿದ್ದೇ ಸರಿ ಎಂಬ ನಂಬಿಕೆಯಲ್ಲಿರಬಾರದು ಎಂದು ಹೇಳಿದೆ.
ಪಾಕಿಸ್ತಾನ ಭಾರತದ ವಿರುದ್ಧ ಕಟುವಾದ ಶಬ್ದಗಳಿಂದ ಟೀಕೆ ಮಾಡಿರುವುದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಭಾರತದ ಭಾರತದ ಗೃಹ ಸಚಿವಾಲಯದ ವಿಶೇಷ ಕಾರ್ಯದರ್ಶಿ ವಿಎಸ್ ಕೆ ಕೌಮುದಿ, "ನಿರೀಕ್ಷೆಯಂತೆಯೇ ಪಾಕಿಸ್ತಾನ ಭಾರತದ ವಿರುದ್ಧ ಅಪಪ್ರಚಾರ ಹಾಗೂ ಆಧಾರ ರಹಿತ ಆರೋಪಗಳನ್ನು ಮಾಡುವುದಕ್ಕೆ ಪ್ರಾರಂಭಿಸಿದೆ" ಎಂದು ಹೇಳಿದೆ.
ಕೌಮುದಿ ಅವರು ವಿಶ್ವಸಂಸ್ಥೆ ಸಭೆಯಲ್ಲಿ ನಡೆದ ಭಯೋತ್ಪಾದಕ ನಿಗ್ರಹ ಸಂಸ್ಥೆಗಳ ಮುಖ್ಯಸ್ಥರ 2 ನೇ ಉನ್ನತ ಮಟ್ಟದ ಕಾನ್ಫರೆನ್ಸ್ ನಲ್ಲಿ ಮಾತನಾಡುತ್ತಿದ್ದರು.
"ಯಾವ ದೇಶ ತನ್ನದೇ ಅಲ್ಪಸಂಖ್ಯಾತರ ವಿರುದ್ಧ ಕಠಿಣ ಹಿಂಸಾಚಾರದಲ್ಲಿ ತೊಡಗುತ್ತದೆಯೋ, ಭಾರತದೆಡೆಗೆ ದ್ವೇಷ ಹರಡಿಸುತ್ತದೆಯೋ ಅಂತಹ ರಾಷ್ಟ್ರದಿಂದ ಈ ನಿಯೋಗದಲ್ಲಿ ಹೊಸತೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
7 ನೇ ಜಾಗತಿಕ ಭಯೋತ್ಪಾದನ ನಿಗ್ರಹ ಕಾರ್ಯತಂತ್ರದ ಪರಾಮರ್ಶೆ ಮುಕ್ತಾಯಗೊಂಡಿದ್ದು ಪಾಕಿಸ್ತಾನದ ಅಪಪ್ರಚಾರವನ್ನು ವಿಶ್ವಸಂಸ್ಥೆ ಸದಸ್ಯರು ತಿರಸ್ಕರಿಸಿದ್ದಾರೆ. ಈಗ ಉಗ್ರ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ವಿಶ್ವಸಮುದಾಯ ಪಾಕಿಸ್ತಾನಕ್ಕೆ ಆಗ್ರಹಿಸುವುದಕ್ಕೆ ಸೂಕ್ತ ಸಮಯ" ಎಂದು ಭಾರತ ಹೇಳಿದೆ.