ಉಪ್ಪಳ: ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ನೇಶನಲ್ ಮೀನ್ಸ್ ಕಂ ಮೆರಿಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿ ಸ್ಕಾಲರ್‍ಶಿಪ್ ಗೆ ಅರ್ಹಳಾದ ಪೈವಳಿಕೆನಗರ ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಪೈವಳಿಕೆನಗರ ನಿವಾಸಿ ಆನಂದ - ಪುಷ್ಪ ದಂಪತಿ ಸುಪುತ್ರಿ ನಿಧಿ ಎ ಶೆಟ್ಟಿಗಾರ್ ಅವಳನ್ನು ಮನೆಗೆ ತೆರಳಿ ಶಾಲು ಹೊದೆಸಿ, ಫಲವಸ್ತು, ಸ್ಮರಣಿಕೆ, ಪದಕ, ಕಲಿಕೋಪಕರಣ ಕಿಟ್ ನೀಡಿ ಗೌರವಿಸಲಾಯಿತು. ಮುಖ್ಯೋಪಾಧ್ಯಾಯ ಇಬ್ರಾಹಿಂ ಬುಡ್ರಿಯ, ರವೀಂದ್ರನಾಥ್ ಕೆ ಆರ್, ಗುಲಾಬಿ ಎನ್, ವತ್ಸಲ ಜಿ ಎಸ್, ಸುಮಯ್ಯ ಎಚ್ ಉಪಸ್ಥಿತರಿದ್ದರು.
ಸ್ಕಾಲರ್ ಶಿಪ್ ವಿಜೇತೆಗೆ ಸನ್ಮಾನ
0
ಜೂನ್ 30, 2021
Tags