ಚೆನ್ನೈ: ಭಾರತದ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು, ಹೈದರಾಬಾದ್ ಮತ್ತು ದೆಹಲಿಗಿಂತ ಚೆನ್ನೈ ಶೇಕಡಾವಾರು ಜನಸಂಖ್ಯೆ ಪೈಕಿ ಅತೀ ಹೆಚ್ಚು ಜನರಿಗೆ ಸಂಪೂರ್ಣ ಎರಡು ಡೋಸ್ ನೀಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ.
ಕೋವಿನ್ ಅಂಕಿ ಅಂಶಗಳ ಪ್ರಕಾರ, ಚೆನ್ನೈನಲ್ಲಿ ಶೇಕಡಾ 8ರಷ್ಟು ನಿವಾಸಿಗಳು ಎರಡೂ ಡೋಸ್ ಸ್ವೀಕರಿಸಿದ್ದಾರೆ. ಎರಡೂ ಡೋಸ್ ಗಳು ಪಡೆದವರ ಶೇಕಡಾವಾರು ರೀತಿ ಮುಂಬೈನಲ್ಲಿ 4ರಷ್ಟು, ಬೆಂಗಳೂರು ಮತ್ತು ದೆಹಲಿಯಲ್ಲಿ ತಲಾ 5ರಷ್ಟು, ಮತ್ತು ಹೈದರಾಬಾದ್ನಲ್ಲಿ 3ರಷ್ಟು. ಇತರ ನಗರಗಳಿಗೆ ಹೋಲಿಸಿದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸುಮಾರು 3.1 ಕೋಟಿ ಜನಸಂಖ್ಯೆ ಇದೆ.
ಕನಿಷ್ಠ ಒಂದು ಡೋಸ್ ಲಸಿಕೆ ಪಡೆದ ನಗರಗಳ ಪೈಕಿ ಬೆಂಗಳೂರು ಅಗ್ರಸ್ಥಾನದಲ್ಲಿದೆ. ಬೆಂಗಳೂರಿನಲ್ಲಿ ಶೇ. 29ರಷ್ಟು, ಚೆನ್ನೈ (25%), ಮುಂಬೈ (18%), ದೆಹಲಿ, ಮತ್ತು ಹೈದರಾಬಾದ್ (ತಲಾ 16%)ರಷ್ಟಾಗಿದೆ.
ಚೆನ್ನೈನ ವ್ಯಾಕ್ಸಿನೇಷನ್ ಪ್ರಗತಿ:
ಚೆನ್ನೈನ 80 ಲಕ್ಷ ಜನಸಂಖ್ಯೆಯಲ್ಲಿ, 56 ಲಕ್ಷ ಜನರು ವ್ಯಾಕ್ಸಿನೇಷನ್ ಪಡೆಯಲು ಅರ್ಹರಾಗಿದ್ದಾರೆ(18 ವರ್ಷಕ್ಕಿಂತ ಮೇಲ್ಪಟ್ಟವರು). ಆ ಪೈಕಿ ಸುಮಾರು ಶೇ. 35ರಷ್ಟು ಕನಿಷ್ಠ ಒಂದು ಡೋಸ್ ಲಸಿಕೆ ಪೂರ್ಣಗೊಳಿಸಿದ್ದರೆ ಬೆಂಗಳೂರಿಗೆ ಎರಡನೆಯದು 41ರಷ್ಟು ಲಸಿಕೆ ಹಾಕಿದೆ.