ರಾಗಿ ಎಷ್ಟೊಂದು ಆರೋಗ್ಯಕರ ಎಂಬುವುದನ್ನು ವಿವರಿಸಬೇಕಾಗಿಲ್ಲ, ಇದರಿಂದ ಮುದ್ದೆ, ರೊಟ್ಟಿ ಜೊತೆಗೆ ರುಚಿಯಾದ ಸ್ವೀಟ್ ಕೂಡ ತಯಾರಿಸಬಹುದು. ನಾವಿಲ್ಲಿ ನೀಡಿರುವುದು ರಾಗಿ ಮಣ್ಣಿನ ರೆಸಿಪಿಯಾಗಿದೆ. ಇದನ್ನು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಸವಿಯಬಹುದು, ಹಲ್ವಾ ತರ ಮೆದುವಾಗಿ ತುಂಬಾನೇ ರುಚಿಯಾಗಿರುತ್ತೆ. ಇದನ್ನು ಮಾಡುವುದು ತುಂಬಾನೇ ಸ್ವಲ್ಪ.
ಇದನ್ನು ಮಾಡಿ ಕೊಡುವುದರಿಂದ ಮಕ್ಕಳ ಆರೋಗ್ಯಕ್ಕೆ ಪೌಷ್ಠಿಕಾಂಶವಿರುವ ಆಹಾರ ಕೂಡ ಸಿಗುವುದು. ಅಲ್ಲದೆ ಇದನ್ನು ಮಾಡಿಟ್ಟು ಒಂದೊಂದು ದುಂಡು ಬಾಯಿಗೆ ಹಾಕಿದರೆ ಆಗಾಗ ತಿನ್ನುವ ಬಾಯಿ ಚಪಲ ಕೂಡ ನಿಯಂತ್ರಿಸಬಹುದು. ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
COOK TIME 25M TOTAL TIME 35 Mins Type: sweet Serves: 5
INGREDIENTS ಬೇಕಾಗುವ ಸಾಮಗ್ರಿ * ರಾಗಿ /ರಾಗಿ ಹಿಟ್ಟು 2 ಕಪ್ * ಹಾಲು 1 ಕಪ್ * ಬೆಲ್ಲ 1 ಕಪ್ * ತುಪ್ಪ 2 ಚಮಚ * ನೀರು 2 ಕಪ್ * ಏಲಕ್ಕಿ 1 * ಡ್ರೈ ಫ್ರೂಟ್ಸ್
HOW TO PREPARE ಮಾಡುವ ವಿಧಾನ * ರಾಗಿ ಬಳಸುವುದಾದರೆ ಅದನ್ನು 65-6 ಗಂಟೆ ನೆನೆ ಹಾಕಿ ಹಾಕಿ ನಂತರ ಗ್ರೈಂಡ್ ಮಾಡಿ ಅದರ ರಸ ಸೋಸಿ ತೆಗೆಯಿರಿ, ಹಟ್ಟು ಆದರೆ ದಕ್ಕೆ ನೀರು ಹಾಕಿ ಕಲೆಸಿ ರಾಗಿ ನೀರು ಸೋಸಿ ಪಾತ್ರೆಗೆ ಹಾಕಿ. * ಈಗ ಸೋಸಿದ ರಾಗಿ ನೀರಿಗೆ ಬೆಲ್ಲದ ಪುಡಿ, ಹಾಲು ಸೇರಿಸಿ ಮಿಕ್ಸ್ ಮಾಡಿ, ಏಲಕ್ಕಿ ಸೇರಿಸಿ. * ಈಗ ಆಡಿಸುತ್ತಾ ಕಡಿಮೆ ಉರಿಯಲ್ಲಿ ಬೇಯಿಸಿ. 2 ಚಮಚ ತುಪ್ಪ ಸೇರಿಸಿ ತಿರುಗಿಸಿ. 20-25 ತಿರುಗಿಸುತ್ತಲೇ ಬೇಯಿಸುತ್ತಿದ್ದರೆ ಗಟ್ಟಿಯಾಗುವುದು. * ಹಿಟ್ಟು ಗಟ್ಟಿಯಾದ ಬಳಿಕ ತಟ್ಟೆಗೆ ತುಪ್ಪ ಸವರಿ ಅದರಲ್ಲಿ ಸುರಿಯಿರಿ ನಂತರ ಒಂದು ಸ್ಪೂನ್‌ನಿಂದ ಅದರ ಮೇಲೆ ತಟ್ಟಿ, ನಂತರ ಡ್ರೈ ಫ್ರೂಟ್ಸ್ ನಿಂದ ಅಲಂಕರಿಸಿ, ತಣ್ಣಗಾಗಲು ಬಿಡಿ. * ನಂತರ ಬೇಕಾದ ಶೇಪ್‌ಗೆ ಕತ್ತರಿಸಿ ಸವಿಯಿರಿ. INSTRUCTIONS ಇದಕ್ಕೆ ಬೇಕಿದ್ದರೆ ತೆಂಗಿನ ಹೋಳು ಕೂಡ ಸೇರಿಸಬಹುದು, ಇದನ್ನು ಮಾಡಿದರೆ ಎರಡು ದಿನ ಇಟ್ಟು ಬಳಸಬಹುದು.
NUTRITIONAL INFORMATION ಸರ್ವ್ - 1/2 ಕೆಜಿ ರಾಗಿ ಮಣ್ಣಿ ಕೊಬ್ಬು - ಶೇ.7 ಪ್ರೊಟೀನ್ - 10ಗ್ರಾಂ ಕಾರ್ಬ್ಸ್ - ಶೇ.25 ನಾರಿನಂಶ - ಶೇ.14