ತ್ರಿಶೂರ್: ನಾಳೆಯಿಂದ ಭಕ್ತರಿಗೆ ಗುರುವಾಯೂರ್ ಪ್ರವೇಶಿಸಲು ಅವಕಾಶವಿರಲಿದೆ. ದಿನವೊಂದಕ್ಕೆ 300 ಜನರಿಗೆ ಭೇಟಿ ನೀಡಲು ಅವಕಾಶ ನೀಡಲಾಗುವುದು. ಏಕಕಾಲಕ್ಕೆ ಕೇವಲ 15 ಜನರಿಗೆ ಪ್ರವೇಶಾನುಮತಿ ನೀಡಲಾಗುವುದು. ರಾಜ್ಯದಲ್ಲಿ ಕೊರೋನಾ ಪ್ರಸರಣ ಕಡಿಮೆ ಇರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ನಾಳೆಯಿಂದ ದೇವಾಲಯದಲ್ಲಿ ವಿವಾಹ ಸಮಾರಂಭಗಳಿಗೂ ಅನುಮತಿ ನೀಡಲಾಗಿದೆ ಎಂದು ಗುರುವಾಯೂರ್ ದೇವಸ್ವಂ ಮಂಡಳಿ ಪ್ರಕಟಿಸಿದೆ. ಕೊರೋನದ ಎರಡನೇ ತರಂಗವನ್ನು ಅನುಸರಿಸಿ ಗುರುವಾಯೂರ್ ಸೇರಿದಂತೆ ರಾಜ್ಯದ ಎಲ್ಲಾ ದೇವಾಲಯಗಳಿಗೆ ಭಕ್ತರು ಪ್ರವೇಶಿಸುವುದನ್ನು ನಿಬರ್ಂಧಿಸಲಾಗಿತ್ತು.
ಪೂಜಾ ಸ್ಥಳಗಳನ್ನು ತೆರೆಯಲು ಅನುಮತಿ ನೀಡುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಘೋಷಿಸಿದ್ದರು. ಕೊರೋನಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಎಚ್ಚರಿಸಿರುವರು.