ಕಾಸರಗೋಡು: ಆಯುರ್ವೇದ ವಿಭಾಗ ಪೆÇೀಸ್ಟ್ ಕೋವಿಡ್ ಕ್ಲಿನಿಕ್ಗಳು ಕಾಸರಗೋಡು ಜಿಲ್ಲೆಯಲ್ಲಿ ಸಜ್ಜುಗೊಂಡಿವೆ.
ಕೋವಿಡ್ ನಿಂದ ಗುಣಮುಖರಾಗಿದ್ದವರಲ್ಲಿ ಕೆಲವು ಶಾರೀರಿಕ ಅಸ್ವಸ್ಥತೆ ಕಂಡುಬರುತ್ತಿದ್ದು, ಅದನ್ನು ಚಿಕಿತ್ಸೆಯಿಂದ ಪೂರ್ಣರೂಪದಲ್ಲಿ ಗುಣಪಡಿಸುವ ಯೋಜನೆಗಳಾದ ಪುನರ್ಜನಿ, ಕೋವಿಡ್ ಚಿಕಿತ್ಸಾ ಯೋಜನೆ ಭೇಷಜಂ, ಕ್ವಾರೆಂಟೈನ್ ನಲ್ಲಿರುವ ಮಂದಿಗಾಗಿರುವ ಅಮೃತಂ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ಒದಗಿಸುವ ನಿಟ್ಟಿನಲ್ಲಿ ಕ್ಲಿನಿಕ್ ಗಳು ಸಜ್ಜುಗೊಂಡಿವೆ ಎಂದು ಭಾರತೀಯ ಚಿಕಿತ್ಸಾ ಇಲಾಖೆಯ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.
ಪ್ರತಿರೋಧ ಔಷಧಗಳೂ, ವ್ಯಾಯಾಮಗಳು, ಯೋಗ, ಉತ್ತಮ ಆಹಾರ ಸೇವನೆ ಇತ್ಯಾದಿ ಸಹಿತದ ಸ್ವಾಸ್ಥ್ಯ, ಸುಖಾಯುಷ್ಯ ಯೋಜನೆಗಳ ಮೂಲಕ ಔಷಧ ವಿತರಣೆಯೂ ಸಾರ್ವಜನಿಕರಿಗಾಗಿ ಉಚಿತವಾಗಿ ಲಭ್ಯವಿದೆ ಎಂದವರು ನುಡಿದರು.