ಕವರಟ್ಟಿ: ದೇಶದ್ರೋಹ ಪ್ರಕರಣದಲ್ಲಿ ಆಯಿಷಾ ಸುಲ್ತಾನಳ ವಿಚಾರಣೆ ಮುಕ್ತಾಯಗೊಂಡಿದೆ. ವಿಚಾರಣೆ ನಾಲ್ಕು ಗಂಟೆಗಳ ಕಾಲ ನಡೆಯಿತು. ವಿಚಾರಣೆ ನಡೆಸಿದ ಬಳಿಕ ಪೋಲೀಸರು ಆಯಿಷಾ ಸುಲ್ತಾನಾ ಅವರ ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದಾರೆ. ಹೇಳಿಕೆಗಳಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸಿ ಆಯಿಷಾಳನ್ನು ಇಂದು ವಿಚಾರಣೆಗೆ ಕರೆಸಲಾಗಿತ್ತು.
ಪೋಲೀಸರು ಪ್ರಸ್ತುತ ಆಯಿಷಾ ಅವರ ಪೋನ್ ಕರೆ ವಿವರಗಳು ಮತ್ತು ಹಣಕಾಸಿನ ವಹಿವಾಟಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಹೈಕೋರ್ಟ್ ಆಕೆಗೆ ಜಾಮೀನು ನೀಡಿದ ನಂತರ ಅವರನ್ನು ಇಂದು ವಿಚಾರಣೆಗೆ ಕರೆಸಲಾಯಿತು. ಷರತ್ತುಗಳ ಮೇಲೆ ಆಯಿಷಾಗೆ ಹೈಕೋರ್ಟ್ ಜಾಮೀನು ನೀಡಿದೆ. ಆಯಿಷಾ ಅವರ ಆರ್ಥಿಕ ವ್ಯವಹಾರದಲ್ಲಿ ಸಂಶಯಗಳಿವೆ ಎಂದು ಕವರಟ್ಟಿ ಪೋಲೀಸರು ನಿನ್ನೆ ಹೇಳಿದ್ದರು.
ಲಕ್ಷದ್ವೀಪ ವಿಷಯದ ಕುರಿತು ಮೀಡಿಯಾ ಒನ್ ಚಾನೆಲ್ ಚರ್ಚೆಯ ವೇಳೆ ಆಯೆಷಾ 'ಜೈವಿಕ ಶಸ್ತ್ರಾಸ್ತ್ರ' ಉಲ್ಲೇಖ ಮಾಡಿದ್ದಕ್ಕಾಗಿ ದೇಶದ್ರೋಹದ ಆರೋಪವಿದೆ. ಕೊರೋನಾ ಪೆÇ್ರೀಟೋಕಾಲ್ ಸಡಿಲಿಸಿದ ನಂತರ ಕೇಂದ್ರ ಸರ್ಕಾರವು ದ್ವೀಪದಲ್ಲಿ ಜೈವಿಕ ಶಸ್ತ್ರಾಸ್ತ್ರಗಳನ್ನು ಅನ್ವಯಿಸಿದೆ ಎಂದು ಆಯಿಷಾ ಆರೋಪಿಸಿದ್ದರು. ಘಟನೆಯಲ್ಲಿ ಈವರೆಗೆ ನಾಲ್ಕು ಬಾರಿ ಕವರಟ್ಟಿ ಪೋಲೀಸರು ಆಯಿಷಾ ಅವರನ್ನು ಪ್ರಶ್ನಿಸಿದ್ದಾರೆ. ಕಳೆದ ಭಾನುವಾರ, ಬುಧವಾರ ಮತ್ತು ಗುರುವಾರ ವಿಚಾರಣೆ ನಡೆಯಿತು.