HEALTH TIPS

ಕೋವಿಡ್​ ರೋಗಿ ಜತೆ ಬಂದಿದ್ದ ಯುವತಿಯ ಮೇಲೆ ಆಂಬ್ಯುಲೆನ್ಸ್​ ಚಾಲಕನಿಂದ ಲೈಂಗಿಕ ದೌರ್ಜನ್ಯ!

          ಕೊಲ್ಲಂ: ಕರೊನಾ ರೋಗಿಯನ್ನು ಆಸ್ಪತ್ರೆಗೆ ಸಾಗಿಸಿದ ಬಳಿಕ ರೋಗಿಯ ಸಂಬಂಧಿಯ ಮೇಲೆ ಆಂಬ್ಯುಲೆನ್ಸ್​ ಚಾಲಕ ಲೈಂಗಿಕ ದೌರ್ಜನ್ಯ ನಡೆಸಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದ್ದು, ಚಾಲಕನನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

        ಆರೋಪಿ ಆಂಬ್ಯುಲೆನ್ಸ್​ ಚಾಲಕನನ್ನು ಕೊಲ್ಲಂನ ಛಾವರ ಮೂಲದ ಸಾಜಿ ಕುತ್ತನ್ ಎಂದು ಗುರುತಿಸಲಾಗಿದೆ. ಕೋವಿಡ್​ನಿಂದಾಗಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯ ಆರೋಗ್ಯ ತೀವ್ರ ಹದಗೆಟ್ಟಿದ್ದರಿಂದ ಜೂನ್​ 3ರಂದು ಆಂಬ್ಯುಲೆನ್ಸ್​ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಕರೊನಾ ರೋಗಿಗೆ ಬೆಂಬಲವಾಗಿ ಆಂಬ್ಯುಲೆನ್ಸ್​ನಲ್ಲಿ ರೋಗಿಯ ಸಂಬಂಧಿ ಯುವತಿಯೊಬ್ಬಳು ಜತೆಯಾಗಿ ತೆರಳಿದ್ದರು. ರೋಗಿಯನ್ನು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅಲ್ಲಿಂದ ವಾಪಸ್ಸಾಗುವ ಮುನ್ನ ಆಸ್ಪತ್ರೆಯ ಒಳಗಡೆ ಹೋದ ಸಾಜಿ ಕುತ್ತನ್​ ಗ್ಲೌಸ್​ ಹಾಕಿಕೊಂಡು ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

            ಈ ಸಂಬಂಧ ಸಂತ್ರಸ್ತ ಯುವತಿ ಕೇರಳ ಮುಖ್ಯಮಂತ್ರಿ ಕಚೇರಿಗೆ ಲಿಖಿತ ದೂರು ದಾಖಲಿಸಿದ್ದು, ಸಿಎಂ ಕಚೇರಿಯಿಂದ ಬಂದ ಸೂಚನೆ ಮೇರೆಗೆ ಆರೋಜಿ ಸಾಜಿ ಕುತ್ತನ್​ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries