ಕಾಸರಗೋಡು: ಕೋವಿಡ್ ಹಾವಳಿ, ಲಾಕೌ ಡೌನ್, ಅಕಾಲಿಕ ಮಳೆ ಸಹಿತ ವಿವಿಧ ಸಂಕಷ್ಟ ಅನುಭವಿಸುತ್ತಿರುವ ಕೃಷಿಕರಿಗೆ ಸಾಂತ್ವನ ನೀಡುವ ನಿಟ್ಟಿನಲ್ಲಿ ಕೃಷಿ ಇಲಾಖೆ ಸಿಬ್ಬಂದಿ "ಕಾಸರಗೋಡು ಮೆರಗೆಣಸು ಚಾಲೆಂಜ್ " ಏರ್ಪಡಿಸಲಿದ್ದಾರೆ.
ಕಳೆದ ವರ್ಷ "ಸುಭಿಕ್ಷ ಕೇರಳಂ" ಯೋಜನೆ ಅಂಗವಾಗಿ 1275 ಹೆಕ್ಟೇರ್ ಜಾಗದಲ್ಲಿ ನೂತನವಾಗಿ ಕೃಷಿ ನಡೆಸಿ ಕಾಸರಗೋಡು ಜಿಲ್ಲೆ ರಾಜ್ಯ ಮಟ್ಟದಲ್ಲಿ ಮೊದಲ ಸ್ಥಾನ ಪಡೆದಿತ್ತು. ಇದರಲ್ಲಿ 300 ಹೆಕ್ಟೇರ್ ಜಾಗದಲ್ಲಿ ಗೆಡ್ಡೆಗೆಣಸಿಗೆ ಆದ್ಯತೆ ನೀಡಲಾಗಿದ್ದು, ಮರಗೆಣಸಿನ ಕೃಷಿ ಈ ನಿಟ್ಟಿನಲ್ಲಿ ಪ್ರಧಾನವಾಗಿತ್ತು. ಸದ್ರಿ ಕಾರಡ್ಕ ಬ್ಲೋಕ್ ನ ಬೇಡಡ್ಕ, ಕುತ್ತಿಕೋಲು ಪಂಚಾಯತ್ ಗಳಲ್ಲಿ, ಪರಪ್ಪ ಬ್ಲೋಕ್ ನ ಬಳಾಲ್, ಕಳ್ಳಾರ್, ಪನತ್ತಡಿ, ವೆಸ್ಟ್ ಏಳೇರಿ, ಕೋಡೋಂ-ಬೇಳೂರು, ಈಸ್ಟ್ ಏಳೇರಿ, ಕಿನಾನೂರು-ಕರಿಂದಳಂ ಪಂಚಾಯತ್ ಗಳಲ್ಲಿ, ನೀಲೇಶ್ವರ ಬ್ಲೋಕ್ ನ ಕಯ್ಯೂರು-ಚೀಮೇನಿ ಪಂಚಾಯತ್ ನಲ್ಲೂ ಮಾತ್ರ 100 ಟನ್ ಗೂ ಅಧಿಕ ಮರಗೆಣಸು ಕೊಯ್ಲು ನಡೆದಿದೆ.
ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಘಟನೆಗಳ, ರೆಸಿಡೆನ್ಶಿಯಲ್ ಅಸೊಸಿಯೇಶನ್ ಗಳ ಸಹಬಾಗಿತ್ವದಲ್ಲಿ ಕಾಸರಗೋಡು ಜಿಲ್ಲೆಯಲ್ಲೇ ಬೆಳೆಯಲಾದ ಫಾಂ ಫ್ರೆಷ್ ಮರಗೆಣಸು ಜನತೆಗೆ ನೇರವಾಗಿ ತಲಪಿಸುವ ನಿಟ್ಟಿನಲ್ಲಿ ಕಾಸರಗೋಡು ಮರಗೆಣಸು ಚಾಲೆಂಜ್ ನಡೆಸಲು ಕೃಷಿ ಇಲಾಖೆ ಸಿದ್ಧವಾಗಿದೆ. ಇದರ ಅಂಗವಾಗಿ ಆಸಕ್ತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಕಾರಡ್ಕ ಬ್ಲೋಕ್ : 9383471976.
ಪರಪ್ಪ ಬ್ಲೋಕ್ : 938371976.
ನೀಲೇಶ್ವರ ಬ್ಲೋಕ್ : 9383472331.