ಹಿನ್ನೆಲೆಯಲ್ಲಿ ಕಳೆದ ವರ್ಷದ ಒಂದನೇ ಅಲೆಯಲ್ಲಿ ಹೇರಲಾದ ನಿಯಂತ್ರಣಗಳ ಭಾಗವಾಗಿ ಕಾಸರಗೋಡು-ದಕ್ಷಿಣಕನ್ನಡ ಜನರು ಅನುಭವಿಸಿದ ಇತಿಹಾಸ ಮತ್ತೆ ಮರುಕಳಿಸಿದೆ.
ಕೇರಳದಿಂದ ದಕ್ಷಿಣ ಕನ್ನಡಕ್ಕೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ. ರಾಜೇಂಂದ್ರ ಕೆ.ವಿ ಇಂದು ಆದೇಶ ಹೊರಡಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ಕೇರಳದಲ್ಲಿ ಡೆಲ್ಟಾ ಸೋಂಕಿನ ಲಕ್ಷಣಗಳು ಕಂಡು ಬಂದಿದ್ದು, ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಕೇರಳ, ಗಡಿಭಾಗದಿಂದ ಸಂಚರಿಸುವವರಿಗೆ ದಕ್ಷಿಣ ಕನ್ನಡ ಜಿಲ್ಲೆಗೆ ಬರಲು ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿರಬೇಕು" ಎಂದಿದ್ದಾರೆ.