ತಿರುವನಂತಪುರ: ಕೇರಳದಲ್ಲಿ ಲಸಿಕೆ ದಾಸ್ತಾನು ಇದ್ದರೂ, ವಿತರಣೆಗೆ ಜಿಪುಣತನ ಮಾಡಲಾಗುತ್ತಿದೆ ಎಂಬ ಆರೋಪಕ್ಕೆ ಎಡೆಯಾಗಿದೆ. 18 ರಿಂದ 45 ವರ್ಷದೊಳಗಿನ ಜನರಿಗೆ ರಾಜ್ಯವು ಖರೀದಿಸಿದ ಲಸಿಕೆಗಳ ಸಂಗ್ರಹದ ಹೊರತಾಗಿಯೂ, ಪೂರೈಕೆ ವಿಸ್ತರಿಸುತ್ತಿಲ್ಲ ಎಂದು ಆರೋಪಿಸಲಾಗಿದೆ. ಪ್ರಸ್ತುತ ವಿತರಣೆಯು ಆದ್ಯತೆಯ ವರ್ಗಗಳನ್ನು ಆಧರಿಸಿದೆ. ಆದರೆ ನೋಂದಾಯಿಸುವುದು ಕಷ್ಟಕರವಾಗುತ್ತಿದೆ.
ಸ್ಟಾಕ್ ಮಾಹಿತಿ:
ರಾಜ್ಯದಲ್ಲಿ ಲಸಿಕೆ ದಾಸ್ತಾನುಗಳ ವಿವರಗಳನ್ನು ಒಳಗೊಂಡ ಸವಿವರ ಮಾಹಿತಿಗಳು ಬಹಿರಂಗಗೊಂಡಿವೆ. 45 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ವಿತರಣೆಗಾಗಿ ಖರೀದಿಸಿದ ಲಸಿಕೆಗಳು ಸೋಮವಾರ ಮಧ್ಯಾಹ್ನದ ಹೊತ್ತಿಗೆ 6,58,950 ಪ್ರಮಾಣಗಳನ್ನು ಹೊಂದಿತ್ತು. ಮೇ 31 ರಂದು 60,704 ಡೋಸ್‍ಗಳನ್ನು ಮತ್ತು ಜೂನ್ 1 ರಂದು 68,900 ಡೋಸ್‍ಗಳನ್ನು ವಿತರಿಸಲಾಯಿತು. ಬುಧವಾರದ ವೇಳೆಗೆ 5,617 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ವರದಿಯ ಪ್ರಕಾರ, ರಾಜ್ಯದಲ್ಲಿ 5.23 ಲಕ್ಷ ಪ್ರಮಾಣಗಳು ಸಂಗ್ರಹದಲ್ಲಿವೆ.
ಮೂರನೇ ಅಲೆಯ ತಡೆಗಾಗಿಯೇ?:
ಕೋವಿಡ್ ಮೂರನೇ ಅಲೆಯ ಬಗ್ಗೆ ಎಲ್ಲೆಡೆ ಚಿಂತನೆಗಳು ಶುರುವಾಗಿದೆ. ಇದನ್ನು ಎದುರಿಸಲು ಲಸಿಕೆಯ ಮೊದಲ ಪ್ರಮಾಣವನ್ನು ಸಾಧ್ಯವಾದಷ್ಟು ಜನರಿಗೆ ನೀಡುವುದೊಂದೇ ಆಗಿದೆ. ಲಸಿಕೆ ಹೆಚ್ಚಿನ ಪ್ರಮಾಣದಲ್ಲಿ ಜೂನ್ ಮಧ್ಯದ ವೇಳೆಗೆ ಬರಲಿದೆ ಎಂದು ಸರ್ಕಾರ ಭರವಸೆ ನೀಡಿದೆ. ಇದಲ್ಲದೆ, ಆರೋಗ್ಯ ಕಾರ್ಯಕರ್ತರು ಸಾಧ್ಯವಾದಷ್ಟು ಜನರನ್ನು ಆದ್ಯತೆಯ ವಿಭಾಗದಲ್ಲಿ ಸೇರಿಸಬೇಕೆಂದು ಸೂಚಿಸುತ್ತಾರೆ.
18 ವರ್ಷ ಮೇಲ್ಪಟ್ಟವರಿಗೆ:
ಕಳೆದ ಮೇ ತಿಂಗಳಿನಿಂದ ಅನುಮೋದನೆ ಪಡೆದ 18 ರಿಂದ 45 ವರ್ಷ ವಯಸ್ಸಿನವರಿಗೆ ಲಸಿಕೆ ನೀಡಬೇಕೆಂಬ ಶಿಫಾರಸಿಗೆ ರಾಜ್ಯಾದ್ಯಂತ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ಯತೆಯ ವಿಭಾಗಗಳಲ್ಲಿ ಹೆಚ್ಚಿನ ಜನರನ್ನು ಸೇರಿಸಲು ಲಸಿಕೆ ಒದಗಿಸಲು ಅಥವಾ ಪೂರೈಕೆಯನ್ನು ವಿಸ್ತರಿಸಲು ಸರ್ಕಾರ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂದು ವರದಿಯಾಗಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ 1,00,237 ಡೋಸ್‍ಗಳನ್ನು ವಿತರಿಸಲಾಗಿದೆ.
ಒಟ್ಟು ವಿತರಣೆ:
ಬುಧವಾರ ಮಧ್ಯಾಹ್ನದವರೆಗೆ ರಾಜ್ಯದಲ್ಲಿ ಒಟ್ಟು 96,42,277 ಡೋಸ್ ಲಸಿಕೆಗಳನ್ನು ವಿತರಿಸಲಾಯಿತು. ಈ ಪೈಕಿ 75,44,092 ಮೊದಲ ಡೋಸ್ ಮತ್ತು 20,98,185 ಸೆಕೆಂಡ್ ಡೋಸ್ ವಿತರಿಸಲಾಗಿದೆ. 45 ರಿಂದ 60 ವರ್ಷದೊಳಗಿನವರಿಗೆ 30,20,995 ಡೋಸ್‍ಗಳನ್ನು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ 35,16,329 ಡೋಸ್‍ಗಳನ್ನು ನೀಡಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ.