ಬದಿಯಡ್ಕ: ಬದಿಯಡ್ಕ ಮಂಡಲ ಯುಡಿಎಫ್ ಸಮಿತಿ ನೇತೃತ್ವದಲ್ಲಿ ಬದಿಯಡ್ಕ ಗ್ರಾಮ ಕಚೇರಿಯ ಮುಂದೆ ಧರಣಿ ನಡೆಯಿತು, ಧರಣಿಯನ್ನು ಡಿಸಿಸಿ ಪ್ರಧಾನ ಕಾರ್ಯದರ್ಶಿ ಎಣ್ಮಕಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಉದ್ಘಾಟಿಸಿ ಮಾತನಾಡಿ ಕೇರಳ ಸರ್ಕಾರವು ಅಧಿಕಾರದ ಪ್ರಾರಂಭದಿಂದಲೇ ಭ್ರಷ್ಟಾಚಾರ ವನ್ನು ಮೈಗೂಡಿಸಿಕೊಂಡು ಅರಣ್ಯಗಳ ಲೂಟಿ ಮಾಡಿ ಸರ್ಕಾರದ ಸಂಪತ್ತನ್ನು ಉಪಯೋಗಿಸಿಕೊಂಡು ಪಕ್ಷವನ್ನು ಬೆಳೆಸುತ್ತಿದೆ ಎಂದು ಆರೋಪಿಸಿದರು.
ಯುಡಿಎಫ್ ಬದಿಯಡ್ಕ ಮಂಡಲ ಅಧ್ಯಕ್ಷ ಸಿಎ ಅಬೂಬಕ್ಕರ್ ಅಧ್ಯಕ್ಷತೆ ವಹಿಸಿದ್ದರು. ನೇತಾರರಾದ ಪಿಜಿ ಚಂದ್ರಹಾಸ ರೈ, ಮಾಹಿನ್ ಕೇಳೊಟ್, ಶ್ಯಾಂಪ್ರಸಾದ್ ಮಾನ್ಯ, ಪಿಜಿ ಜಗನ್ನಾಥ ರೈ, ಅನ್ವರ್ ಓಝೋನ್, ಚಂದ್ರಹಾಸ ಮಾಸ್ತರ್, ಪಂಚಾಯತಿ ಅಧ್ಯಕ್ಷೆ ಶಾಂತಾ ಬಿ, ಉಪಾಧ್ಯಕ್ಷ ಎಂ ಅಬ್ಬಾಸ್, ಖಾದರ್ ಮಾನ್ಯ, ಕರುಣಾಕರ ಬದಿಯಡ್ಕ, ಪಂಚಾಯತಿ ಸದಸ್ಯೆ ಜಯಶ್ರೀ, ಗೋಪಾಲ ದರ್ಬೆತ್ತÀಡ್ಕ, ಅಬ್ದುಲ್ಲಾ ಚಳಕೆರೆ ಮಾತನಾಡಿದರು. ಯೂತ್ ಕಾಂಗ್ರೆಸ್, ಯೂತ ಲೀಗ್ ಕಾರ್ಯಕರ್ತರು ನೇತೃತ್ವ ನೀಡಿದರು. ಬದಿಯಡ್ಕ ಮಂಡಲ ಅಧ್ಯಕ್ಷ ಎನ್ ನಾರಾಯಣ ಮಣಿಯಾಣಿ ಸ್ವಾಗತಿಸಿ, ಮುಸ್ಲಿಂ ಲೀಗ್ ಪಂಚಾಯತಿ ಅಧ್ಯಕ್ಷ ಬದೃದ್ದಿನ್ ಮಾಸ್ತರ್ ವಂದಿಸಿದರು.