ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಸಾವುಗಳನ್ನು ವರದಿ ಮಾಡಲು ವಿಕೇಂದ್ರೀಕೃತ ಆನ್‍ಲೈನ್ ವ್ಯವಸ್ಥೆಗೆ ಸರ್ಕಾರ ಅನುಮತಿ ನೀಡಿದೆ. ವಿಶೇಷವಾಗಿ ಸ್ಥಾಪಿಸಲಾದ ಆನ್‍ಲೈನ್ ರಿಪೆÇೀರ್ಟಿಂಗ್ ಪೋರ್ಟಲ್ ಮೂಲಕ ಸಾವುಗಳನ್ನು ವರದಿ ಮಾಡಬಹುದು ಮತ್ತು ದೃಢೀಕರಿಸಬಹುದು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐಸಿಎಂಆರ್ ಮಾರ್ಗಸೂಚಿಗಳ ಪ್ರಕಾರ ಪ್ರಸ್ತುತ ಕೊರೋನಾ ಸಾವುಗಳು ವರದಿಯಾಗುತ್ತಿವೆ.
ಆನ್‍ಲೈನ್ ರಿಪೆÇೀಟಿರ್ಂಗ್ ಪೋರ್ಟಲ್ ನೈಜ ಸಮಯದಲ್ಲಿ ವರದಿಮಾಡುವ ವ್ಯವಸ್ಥೆಯನ್ನು ಹೊಂದಿದೆ. ಆನ್‍ಲೈನ್‍ನಲ್ಲಿ ಡೆತ್ ರಿಪೋರ್ಟಿಂಗ್ ಮಾಡುವುದರಿಂದ ಕೊರೋನಾ ಕಾರಣ ಮರಣ ಸಂಭವಿಸಿದೆಯೇ,ಅಥವಾ ಅಲ್ಲವೇ ಎಂಬುದನ್ನು ಖಚಿತಪಡಿಸುವ ವಿಳಂಬವನ್ನು ಕಡಿಮೆ ಮಾಡಬಹುದು.
ಸಾವಿಗೆ ಕಾರಣವನ್ನು ತಿಳಿಸುವ ಆನ್‍ಲೈನ್ ವೈದ್ಯಕೀಯ ಬುಲೆಟಿನ್ ನ್ನು ಸಾವು ಸಂಭವಿಸಿದ ಆಸ್ಪತ್ರೆಯಲ್ಲಿ ವೈದ್ಯರು ಅಥವಾ ವೈದ್ಯಕೀಯ ಅಧೀಕ್ಷಕರು ಸಿದ್ಧಪಡಿಸಬೇಕು. ಅವರು ಸಾಕಷ್ಟು ಮಾಹಿತಿ ಮತ್ತು ದಾಖಲೆಗಳನ್ನು ಪೋರ್ಟಲ್‍ನಲ್ಲಿ ಅಪ್‍ಲೋಡ್ ಮಾಡಬೇಕು. ಇದನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಪರಿಶೀಲಿಸಿ 24 ಗಂಟೆಗಳಲ್ಲಿ ದೃಢಪಡಿಸಬೇಕು. ಜಿಲ್ಲಾ ಕಣ್ಗಾವಲು ಅಧಿಕಾರಿ ಮತ್ತು ಹೆಚ್ಚುವರಿ ಜಿಲ್ಲಾ ವೈದ್ಯಕೀಯ ಅಧಿಕಾರಿಯನ್ನು ಒಳಗೊಂಡ ಸಮಿತಿಯು ಮಾರ್ಗಸೂಚಿಗಳ ಪ್ರಕಾರ ವ್ಯಕ್ತಿ ಕೋವಿಡ್ ನಿಂದಲೇ ಮೃತಪಟ್ಟಿರುವರೇ ಎಂದು ಪರಿಶೀಲಿಸುತ್ತದೆ. ಇದನ್ನು ಜಿಲ್ಲಾ ವೈದ್ಯಕೀಯ ಅಧಿಕಾರಿ ಖಚಿತಪಡಿಸಿರಬೇಕು. ಹೀಗಾಗಿ, ಜಿಲ್ಲಾ ಮಟ್ಟದಲ್ಲೇ ಕೋವಿಡ್ ಸಾವನ್ನು ನಿರ್ಧರಿಸಬಹುದಾಗಿದೆ.
ಕೊರೋನಾದಿಂದಾಗುವ ಮರಣ ಜಿಲ್ಲಾ ಮಟ್ಟದಲ್ಲೇ ದೃಢಪಟ್ಟ ನಂತರ, ಅದನ್ನು ರಾಜ್ಯಮಟ್ಟದ ವರದಿ ಸಮಿತಿಗೆ ವರದಿ ಮಾಡಲಾಗುತ್ತದೆ. ಈ ಸಮಿತಿಯು ಎಲ್ಲಾ 14 ಜಿಲ್ಲೆಗಳ ವರದಿಗಳನ್ನು ಸಂಗ್ರಹಿಸುತ್ತದೆ ಮತ್ತು ರಾಜ್ಯ ಮಟ್ಟದಲ್ಲಿ ಸಾವಿನ ಸಂಖ್ಯೆಯನ್ನು ಅಂದಾಜು ಮಾಡುತ್ತದೆ.