HEALTH TIPS

ರಿ ಶೆಫಲಿಂಗ!: ಈ ವಾರದ ಅಂತ್ಯದ ವೇಳೆಗೆ ಹೊಸ ಡಿಸಿಸಿ ಅಧ್ಯಕ್ಷರ ಆಯ್ಕೆ ಸಾಧ್ಯತೆ: ಹೊಸಬರು ಮತ್ತು ಮಹಿಳೆಯರಿಗೂ ಪರಿಗಣನೆ: ಜಂಬೋ ಸಮಿತಿಗಳಿಗೆ ಖೊಕ್:

  

           ತಿರುವನಂತಪುರ: ಕೆ ಸುಧಾಕರನ್ ಅವರು ಕೇರಳ ಪ್ರದೇಶ ಕಾಂಗ್ರೆಸ್ಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಮುಂದಿನ ದಿನಗಳಲ್ಲಿ ಕೆಪಿಸಿಸಿ-ಡಿಸಿಸಿ ಪದಾಧಿಕಾರಿಗಳ ಬದಲಾವಣೆಗಳ ಸಾಧ್ಯತೆಗಳಿವೆ ಎಂದು ತರ್ಕಿಸಲಾಗಿದೆ. ಈ ಬಾರಿ ಪಕ್ಷದ ನಾಯಕತ್ವವು ಜಂಬೂ ಸಮಿತಿಗಳನ್ನು ಹೊಂದದಿರಲು ನಿರ್ಧರಿಸಿದ್ದು, ಹೋದವರು, ಬಂದವರಿಗೆಲ್ಲ ಮಣೆ ಹಾಕದಿರಲು ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಗುಂಪುಗಳ ಮೆರವಣಿಗೆಯಲ್ಲಿ ಅದು ಸಾಧ್ಯವೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

                   ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್, ಕಾರ್ಯಕಾರಿ ಅಧ್ಯಕ್ಷರಾಗಿ ಪಿ.ಟಿ.ಥಾಮಸ್, ಕೊಡಿಕುನ್ನಿಲ್ ಸುರೇಶ್ ಮತ್ತು ಟಿ ಸಿದ್ದೀಕ್ ಅವರು ಬುಧವಾರ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಇದರ ನಂತರ ಇತರ ಪದಾಧಿಕಾರಿಗಳ ಕುರಿತು ಚರ್ಚಿಸಲಾಗುವುದು. ಕೆಪಿಸಿಸಿ-ಡಿಸಿಸಿ ಮಟ್ಟದಲ್ಲಿ, ಗರಿಷ್ಠ 25 ಮಂದಿ ಪದಾಧಿಕಾರಿಗಳು ಸಾಕು ಎಂಬುದು ಈಗಿನ ನಿರ್ಧಾರವಾಗಿದೆ ಎನ್ನಲಾಗಿದೆ. 

             ಪ್ರಸ್ತುತ ಕೆಪಿಸಿಸಿ ಸಮಿತಿಯು 100 ಕ್ಕೂ ಹೆಚ್ಚು ಪದಾಧಿಕಾರಿಗಳನ್ನು ಹೊಂದಿದೆ. ಜವಾಬ್ದಾರಿ-ಸ್ಥಾನಮಾನಗಳು ಸಹ ಒಬ್ಬರಿಗೊಬ್ಬರು ತಿಳಿದಿಲ್ಲದ ಪರಿಸ್ಥಿತಿ ಇದೆ. ಅನೇಕರು ಸ್ಥಾನಮಾನ ಪಡೆದ ಬಳಿಕ ಏನಾದರೆಂಬುದೂ ತಿಳಿದಿರದ ಸ್ಥಿತಿ ಇದೆ.

         ಈ ಪರಿಸ್ಥಿತಿ ಬದಲಾಗಬೇಕೆಂದು ಎಲ್ಲರೂ ಬಯಸಿದ್ದಾರೆ ಎನ್ನಲಾಗಿದ್ದು, ಕಾರ್ಯನಿರ್ವಹಿಸದ ಒಬ್ಬರನ್ನೂ ಯಾವ ಕಾರಣಕ್ಕೂ ಪರಿಗಣಿಸಬಾರದು ಎಂದು ಹೈಕಮಾಂಡ್ ಹೇಳಿದೆ.  ಕಾರ್ಯನಿರತ ಅಧ್ಯಕ್ಷರು ಇದ್ದಾಗ ಉಪಾಧ್ಯಕ್ಷರು ಏಕೆ ಇದ್ದಾರೆ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ.

                    ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳ ಸಂಖ್ಯೆಯನ್ನು ಕಡಿಮೆ ಮಾಡುವ ಅವಶ್ಯಕತೆಯಿದೆ. ಡಿಸಿಸಿ ಮಟ್ಟದಲ್ಲಿಯೂ ಇದನ್ನು ಅನುಸರಿಸಲಾಗುವುದು. ಗುಂಪು ಮಾನದಂಡಗಳನ್ನು ನೋಡದೆ ಡಿಸಿಸಿ ಅಧ್ಯಕ್ಷರನ್ನು ಘೋಷಿಸಬೇಕು ಎಂದು ತಿಳಿದುಬಂದಿದೆ. 

             ಡಿಸಿಸಿ ಅಧ್ಯಕ್ಷರ ಹೆಸರನ್ನು ಈ ವಾರದ ಕೊನೆಗೆ ಅಥವಾ ಮುಂದಿನ ವಾರದ ಆರಂಭದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ. ಹೊಸಬರು ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆಯುವ ನಿರೀಕ್ಷೆ ಇದೆ.  ಮಹಿಳೆಯರಿಗೆ ಸ್ಥಾನ ನೀಡಲು ಉಸದ್ದೇಶಿಸಲಾಗಿದೆ ಎಮದು ಮೂಲಗಳು ತಿಳಿಸಿವೆ. 

                ಏತನ್ಮಧ್ಯೆ, ಪಕ್ಷದ ಅಧ್ಯಕ್ಷ ಮತ್ತು ಪ್ರತಿಪಕ್ಷದ ನಾಯಕನ ನಿರ್ಧಾರದಿಂದ ಅಸಮಾಧಾನಗೊಂಡಿರುವ ಎ ಮತ್ತು ಐ ಗುಂಪುಗಳು ಮರುಸಂಘಟನೆಯೊಂದಿಗೆ ಸಹಕರಿಸಲಿವೆ. ಸದ್ಯಕ್ಕೆ, ಅವರು ಹೈಕಮಾಂಡ್ ನೊಂದಿಗೆ ಮುನಿದು ಮುಂದುವರಿಯದಿರಲು ನಿರ್ಧರಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries