ತಿರುವನಂತಪುರ: ಕರ್ನಾಟಕ ಸಂಗೀತ ವಿಶಾರದೆ, ಪದ್ಮಶ್ರೀ ಬಿ ಪೊನ್ನಮ್ಮಾಲ್ (96) ಮಂಗಳವಾರ ನಿಧನರಾದರು. ವಯೋಸಹಜ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. 2017 ರಲ್ಲಿ ಅವರನ್ನು ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು.
ತಿರುವನಂತಪುರ ಶ್ರೀಅನಂತಪದ್ಮನಾಭ ಸನ್ನಿಧಿಯ ಆವರಣದೊಳಗಿನ ನವರಾತ್ರಿ ಮಂಟಪದಲ್ಲಿ ಸಂಗೀತಾಲಾಪನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಪೊನ್ನಮ್ಮಾಳ್ ಪಾಲಿನದ್ದಾಗಿದೆ.
ಪೊನ್ನಮ್ಮಾಳ್ ತಮಿಳುನಾಡು ಮತ್ತು ಕೇರಳದಲ್ಲಿ ಅನೇಕ ಸಂಗೀತ ಕಚೇರಿಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಸೆಪ್ಟೆಂಬರ್ 23, 2006 ರಂದು ತಿರುವನಂತಪುರಂನ ನವರಾತ್ರಿ ಮಂಟಪದಲ್ಲಿ ಹಾಡಿದ್ದರು. ಕೋಟೆಯೊಳಗಿನ ನವರಾತ್ರಿ ಮಂಟಪದಲ್ಲಿ ಮೊದಲ ಬಾರಿಗೆ ಹಾಡಿದ ಪೆÇನ್ನಮ್ಮಾಳ್, ಮಹಿಳೆಯರಿಗೆ ಪ್ರವೇಶ ನಿಷೇಧಿಸುವ 300 ವರ್ಷಗಳ ಸಂಪ್ರದಾಯವನ್ನು ಕೊನೆಗೊಳಿಸಿದ್ದರು.
ಶಿಕ್ಷಕ ಮಹಾದೇವ ಅಯ್ಯರ್ ಮತ್ತು ಭಗವತಿ ಅಮ್ಮಾಳ್ ದಂಪತಿಗಳ ಪುತ್ರಿಯಾಗಿ 1924 ರಲ್ಲಿ ಜನಿಸಿದ ಪೆÇನ್ನಮ್ಮಾಳ್ ಅವರು ತಮ್ಮ ಏಳನೇ ವಯಸ್ಸಿನಲ್ಲಿ ಸಂಗೀತವನ್ನು ಅಧ್ಯಯನ ಮಾಡಲು ಪ್ರಾರಂಭಿಸಿದರು. ಗಾನಪ್ರವೀಣ ಮತ್ತು ಗಾನವಿಭೂಷಣವು ತಿರುವನಂತಪುರಂನ ಸ್ವಾತಿ ತಿರುನಾಲ್ ಮ್ಯೂಸಿಕ್ ಅಕಾಡೆಮಿಯ ಮೊದಲ ಬ್ಯಾಚ್ ನಲ್ಲಿ ಪ್ರಥಮ ದರ್ಜೆಯೊಂದಿಗೆ ಪಾಸು ಮಾಡಿದ್ದರು.
ಪೆÇನ್ನಮ್ಮಾಳ್ ತಮ್ಮ 18 ನೇ ವಯಸ್ಸಿನಲ್ಲಿ ತಿರುವನಂತಪುರಂನ ಕಾಟನ್ಹಿಲ್ ಬಾಲಕಿಯರ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಸ್ವಾತಿ ತಿರುನಾಳ್ ಮ್ಯೂಸಿಕ್ ಅಕಾಡೆಮಿಯಲ್ಲಿ ಉಪನ್ಯಾಸಕಿಯಾಗಿ, ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿದರು. ತ್ರಿಪುನಿತ್ತುರಾದ ಆರ್‍ಎಲ್‍ವಿ ಕಾಲೇಜ್ ಆಫ್ ಮ್ಯೂಸಿಕ್‍ನ ಪ್ರಾಂಶುಪಾಲರಾಗಿ ನಿವೃತ್ತರಾದರು.