ತಿರುವನಂತಪುರ; ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಭಾರತೀಯ ರೈಲ್ವೇ ಬುಧವಾರದಿಂದ ಹಲವಾರು ಹೆಚ್ಚುವರಿ ರೈಲುಗಳ ಸಂಚಾರವನ್ನು ಆರಂಭಿಸಿದೆ.
ಜನಶತಾಬ್ದಿ ಸೇರಿದಂತೆ 15 ಹೊಸ ರೈಲುಗಳ ಸಂಚಾರ ಬುಧವಾರದಿಂದ ಆರಂಭವಾಗಿದೆ. ಈ ರೈಲುಗಳಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬೇಕು.
ವಿವಿಧ ರಾಜ್ಯಗಳು ಕೋವಿಡ್ 2ನೇ ಅಲೆ ಹರಡುವಿಕೆ ತಡೆಯಲು ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಕೇರಳದಿಂದ ಸಂಚಾರ ನಡೆಸುವ 31 ರೈಲುಗಳನ್ನು ರದ್ದುಗೊಳಿಸಲಾಗಿತ್ತು. ಈಗ 15 ರೈಲುಗಳ ಸಂಚಾರ ಪುನಃ ಆರಂಭಿಸಲಾಗಿದೆ.
ಕೇರಳದಿಂದ ಸಂಚಾರ ನಡೆಸುವ ಕೆಲವು ರೈಲುಗಳು ಕರ್ನಾಟಕಕ್ಕೆ ಸಹ ಆಗಮಿಸಲಿವೆ. ರೈಲುಗಳಲ್ಲಿ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷಾ ವರದಿ ಕಡ್ಡಾಯವಲ್ಲ. ಆದರೆ ಬೆಂಗಳೂರಿನ ರೈಲು ನಿಲ್ದಾಣದಲ್ಲಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಲಾಗುತ್ತಿದೆ.
ಸಂಚಾರ ಆರಂಭಿಸಿದ ರೈಲುಗಳ ಪಟ್ಟಿ
* ಕೋಚುವೆಲಿ - ಮೈಸೂರು
* ತಿರುವನಂತಪುರಂ - ಮೈಸೂರು
* ಎರ್ನಾಕುಲಂ - ಬೆಂಗಳೂರು ಇಂಟರ್ ಸಿಟಿ
* ಎರ್ನಾಕುಲಂ - ಕಣ್ಣೂರು ಇಂಟರ್ ಸಿಟಿ
* ತಿರುವನಂತಪುರಂ - ಎರ್ನಾಕುಲಂ
* ತಿರುವನಂತಪುರಂ - ಕಣ್ಣೂರು ಜನ ಶತಾಬ್ದಿ
* ನಾಗರಕೋಯಿಲ್ - ಕೊಯಮತ್ತೂರು
* ತಿರುವನಂತಪುರಂ - ತಿರುಚಿರಾಪಳ್ಳಿ
ವಿವಿಧ ರಾಜ್ಯಗಳಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದ್ದು, ಜನರ ಸಂಚಾರವೂ ಹೆಚ್ಚಾಗಲಿದೆ. ಭಾರತೀಯ ರೈಲ್ವೆ ಈ ವಾರದಿಂದಲೇ 100 ಹೆಚ್ಚುವರಿ ರೈಲುಗಳನ್ನು ಓಡಿಸಲು ಮುಂದಾಗಿದೆ.
ಕಳೆದ ವರ್ಷ ಲಾಕ್‌ಡೌನ್ ಘೋಷಣೆ ಮಾಡಿದ ಬಳಿಕ ಭಾರತೀಯ ರೈಲ್ವೆ ಇನ್ನೂ ಪೂರ್ಣ ಪ್ರಮಾಣದಲ್ಲಿ ರೈಲು ಸಂಚಾರವನ್ನು ಆರಂಭಿಸಿಲ್ಲ. ಹಬ್ಬದ ವಿಶೇಷ, ವಿಶೇಷ ರೈಲುಗಳನ್ನು ಮಾತ್ರ ಭಾರೀ ಬೇಡಿಕೆ ಇರುವ ಮಾರ್ಗದಲ್ಲಿ ಓಡಿಸುತ್ತಿದೆ. ಓಡಿಸುತ್ತಿದೆ.