ಕಾಸರಗೋಡು: ಮಹಿಳಾ ಶಕ್ತಿ ಕೇಂದ್ರ ಗ್ರಾಮೀಣ ಮಹಿಳೆಯರ ಏಳಿಗೆ ಗುರಿಯಾಗಿಸಿ ಚಟುವಟಿಕೆ ನಡೆಸುತ್ತಿದ್ದು, ಗಮನ ಸೆಳೆಯುತ್ತಿದೆ.
ಮಹಿಳಾ-ಶಿಶು ಅಭಿವೃದ್ಧಿ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಪ್ರವೃತ್ತವಾಗಿರುವ ಈ ಕೇಂದ್ರ ಮೂಲಕ ಈಗಾಗಲೇ ಪರಿಹಾರಗೊಂಡಿರುವುದು ಸುಮಾರು 55 ದೂರುಗಳು.
ಉದ್ಯೋಗ, ನಿಪುಣತೆ ತರಬೇತಿ, ತಾಂತ್ರಿಕ ತರಬೇತಿ, ಪೆÇೀಷಕಾಹಾರ ಆರೋಗ್ಯ ಯೋಜನೆ ಇತ್ಯಾದಿ ಒಂದೇ ಛಾವಣಿಯಡಿ ಒದಗಿಸಿ ಗ್ರಾಮೀಣ ಮಹಿಳೆಯರ ಪ್ರಬಲೀಕರಣ ನಡೆಸುವುದು ಇಲ್ಲಿನ ಉದ್ದೇಶ. ಕಳೆದ ವರ್ಷ ನ.4ರಂದು ಕಾಸರಗೋಡು ಜಿಲ್ಲೆಯಲ್ಲಿ ಮಹಿಳಾ ಶಕ್ತಿ ಕೇಂದ್ರ ಚಟುವಟಿಕೆ ಆರಂಭಿಸಿದೆ. ಯೋಜನೆ ಮೂಲಕ ಮಹಿಳೆಯರಿಗೆ, ಮಕ್ಕಳಿಗೆ ಮೋಟಿವೇಷನ್ ತರಗತಿಗಳು, ಕಾನೂನು ತರಗತಿಗಳು, ಕೌನ್ಸಿಲಿಂಗ್ ಸೇವೆಗಳು, ಜೆಂಡರ್ ಬೆಡ್ಸ್ ಕಾರ್ಯಕ್ರಮಗಳು, ಸ್ವಯಂ ಸಂರಕ್ಷಣೆ ತರಬೇತಿ ತರಗತಿಗಳು, ಉದ್ಯೋಗ ತರಬೇತಿ, ಕಾನೂನು ಸಹಾಯ, ಪೆÇಲೀಸ್ ಸಹಾಯ ಇತ್ಯಾದಿ ಸೇವೆ ಒದಗಿಸಲಾಗುತ್ತಿದೆ.
ಜಿಲ್ಲಾ ಮಟ್ಟದಲ್ಲಿ ಮಹಿಳಾ ವೆಲ್ಫೇರ್ ಕಚೇರಿ, ಇಬ್ಬರು ಜಿಲ್ಲಾ ಸಂಚಾಲಕರನ್ನು ನೇಮಿಸಲಾಗಿದೆ. ಜಿಲ್ಲಾ ಮಟ್ಟದ ಸಮಿತಿ ಮಹಿಳಾ ಶಕ್ತಿ ಕೇಂದ್ರದ ಚಟುವಟಿಕೆಗಳನ್ನು ಏಕೀಕೃತಗೊಳಿಸುತ್ತದೆ. ಕೇಂದ್ರ-ರಾಜ್ಯ ಸರಕಾರಗಳ ವಿವಿಧ ಇಲಾಖೆಗಳ ಮೂಲಕ ಜಾರಿಗೊಳಿಸುವ ಯೋಜನೆಗಳು, ನೇಮಕಾತಿಗಳು ಇತ್ಯಾದಿ ಕುರಿತೂ ಗ್ರಾಮೀಣ ಮಹಿಳೆಯರಿಗೆ ಜಾಗೃತಿ ಸಹಾಯ ಒದಗಿಸಲಾಗುತ್ತದೆ. ಮಹಿಳಾ ಶಿಶು ಅಭಿವೃದ್ಧಿ ಇಲಾಖೆ ನೂತನವಾಗಿ ರಚಿಸಿರುವ ಕಾದೋರ್ತ್ (ಕಿವಿಗೊಡುವಿಕೆ) ಆನ್ ಲೈನ್ ಪೆÇೀರ್ಟಲ್ ಮೂಲಕ 32 ದೂರುಗಳು ಲಭಿಸಿದ್ದು, ಅಗತ್ಯದ ಕಾನೂನು ಸಹಾಯ ಒದಗಿಸಲಾಗಿದೆ ಎಂದು ಜಿಲ್ಲಾ ಮಹಿಳಾ ಶಿಶು ಅಭಿವೃದ್ಧಿ ಅಧಿಕಾರಿ ಕವಿತಾರಾಣಿ ರಂಜಿತ್ ತಿಳಿಸಿದರು. ಮಹಿಳಾ ಶಕ್ತಿ ಕೇಂದ್ರದ ಸಹಾಯವಾಣಿ ನಂಬ್ರ 940008816 ಮೂಲಕ ಯಾ ಇ-ಮೇಲ್ ಐಡಿ ಆಗಿರುವ mskkasaragod@gmail.com ಮೂಲಕ ಸಂಪರ್ಕಿಸಬಹುದು.