ಕಾಸರಗೋಡು: ಕರೊನಾ ಸಂಕಷ್ಟದ ನಡುವೆ ಕಾಸರಗೋಡು ಜಿಲ್ಲೆಯ ನಾನಾ ಕಡೆ ಡೆಂಘೆ ಜ್ವರ ಕಾಣಿಸಿಕೊಂಡಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಡೆಂಘೆ ಬಾಧಿಸಿ ದಾಖಲಾಗುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆಸ್ಪತ್ರೆಯ ಪುರುಷರ ವಾಡಿನಲ್ಲಿ ಈಗಾಗಲೇ 17ಮಂದಿ ಹಾಗೂ ಮಹಿಳಾ ವಾಡಿನಲ್ಲಿ 11ಮಂದಿ ದಾಖಲಾಗಿದ್ದು, ಈ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಇದರಲ್ಲಿ ತೀವ್ರ ನಿಗಾ ವಿಭಾಗದಲ್ಲಿ ಎಂಟು ಮಂದಿ ದಾಖಲಾಗಿದ್ದು, ಕೆಲವರು ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಚಿಕಿತ್ಸೆಗೆ ದಾಖಲಾದವರಲ್ಲಿ ಜಿಲ್ಲೆಯ ಕುತ್ತಿಕ್ಕೋಲ್, ಮುಳಿಯಾರ್, ಬದಿಯಡ್ಕ, ದೇಲಂಪಾಡಿ, ಬದಿಯಡ್ಕ ವ್ಯಾಪ್ತಿಯ ರೋಗಿಗಳು ಒಳಗೊಂಡಿದ್ದಾರೆ. ಕಳೆದ ಒಂದು ವಾರದ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಹೊರ ರಓಗಿಗಳಾಗಿ ಚಿಕಿತ್ಸೆ ಪಡೆದು ತೆರಳಿದವರಿದ್ದಾರೆ. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲೂ ಡೆಂಘೆ ಕಾಣಿಸಿಕೊಂಡಿದ್ದು, ಈಗಾಗಲೇ ಇಬ್ಬರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರೊನಾ ಬಾಧೆಯಿಂದ ಈ ಬಾರಿ ಮಳೆಗಾಲಪೂವ ಶುಚೀಕರಣಕಾಯ ನಡೆಯದಿರುವುದು ವ್ಯಾಪಕ ಸೊಳ್ಳೆಗಳ ಉತ್ಪತ್ತಿಗೂ ಕಾರಣವಾಗಿದೆ. ಮಾತ್ರವಲ್ಲ ಡೆಂಘೆ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿಮೂಡಿಸುವ ಕೆಲಸಗಳೂ ಸಮಪಕವಾಗಿ ನಡೆದಿಲ್ಲ ಎಂಬ ದೂರು ವ್ಯಾಪಕಗೊಂಡಿದೆ. ಡೆಂಘೆ ಸಹಿತ ಸಂಕ್ರಾಮಿಕ ರೋಗಗಳ ಬಗ್ಗೆ ಭೀತಿಗೊಳಗಾಗದೆ, ರೋಗಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರ ಸಲಹೆಯಂತೆ ಚಿಕಿತ್ಸೆಪಡೆದುಕೊಳ್ಳುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.