ಕೊಚ್ಚಿ: ರಾಜ್ಯ ಮಹಿಳಾ ಆಯೋಗದ ನಿರ್ಗಮಿತ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ಅವರು ರಾಜೀನಾಮೆ ನೀಡಿದ ಬಳಿಕ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಪಕ್ಷ ನೀಡಿದ ವಿವರಣೆಯನ್ನು ಮೀರಿ ಮಾಧ್ಯಮಗಳಿಗೆ ಹೇಳಲು ಏನೂ ಇಲ್ಲ ಎಂದು ಜೋಸೆಫೀನ್ ಹೇಳಿದರು. ಮಹಿಳಾ ಆಯೋಗದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಜೋಸೆಫೀನ್ ನಿನ್ನೆ ಬೆಳಿಗ್ಗೆ ಅಂಗಮಾಲಿಯ ತನ್ನ ಸ್ವಗೃಹಕ್ಕೆ ತೆರಳಿದರು.
ರಾಜೀನಾಮೆ ಬಳಿಕ, ಜೋಸೆಫೀನ್ ಮಾಧ್ಯಮಗಳಿಂದ ಭಾರೀ ಅಂತರ ಕಾಯ್ದುಕೊಂಡರು. ಶುಕ್ರವಾರ ಸಂಜೆ ಮತ್ತು ನಿನ್ನೆ ಬೆಳಿಗ್ಗೆ ಪ್ರತಿಕ್ರಿಯೆ ಕೋರಿದರೂ, ಜೋಸೆಫೀನ್ ತನ್ನ ಮುಖವನ್ನು ಮಾಧ್ಯಮಗಳತ್ತ ತಿರುಗಿಸದೆ ಸುಮ್ಮನಾದರು. ಪಕ್ಷದೊಂದಿಗೆ ಅವರು ಈಗಾಗಲೇ ತಮ್ಮ ಅಭಿಪ್ರಾಯಗಳನ್ನು ತಿಳಿಸಿರುವರು. ಘಟನೆ ಭಾರೀ ಸದ್ದುಮಾಡಲು ಮಾಧ್ಯಮಗಳು ಭೇಟೆಯಾಡಿವೆ ಎಂಬ ಅಭಿಪ್ರಾಯ ಜೋಸೆಫೀನ್ ಅವರದು ಎನ್ನಲಾಗಿದೆ. ಈ ಬಗ್ಗೆ ನಾಯಕತ್ವಕ್ಕೆ ಮನವರಿಕೆ ಮಾಡಲು ಅವರು ಪ್ರಯತ್ನಿಸಬಹುದು ಎನ್ನಲಾಗಿದೆ.
ಟೆಲಿವಿಷನ್ ಚಾನೆಲ್ ಚರ್ಚೆಯೊಂದರಲ್ಲಿ ದೂರು ಹೇಳಿಕೊಂಡ ಯುವತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕಾಗಿ ಸೋಶಿಯಲ್ ಮೀಡಿಯಾ ಸೇರಿದಂತೆ ಜೋಸೆಫೀನ್ ವಿರುದ್ಧ ಪ್ರತಿಭಟನೆಗಳು ಪ್ರಬಲವಾಗಿದ್ದವು. ಪಕ್ಷದ ಕೋರಿಕೆಯ ಮೇರೆಗೆ ಜೋಸೆಫೀನ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಜೋಸೆಫೀನ್ ಅವರ ರಾಜೀನಾಮೆ ಅವರ ಅವಧಿಗೆ 11 ತಿಂಗಳುಗಳು ಬಾಕಿ ಉಳಿದಿರುವಂತೆ ಸನ್ನಿಹಿತವಾದುದು ದುರ್ವಿಧಿ ಎನ್ನಲಾಗಿದೆ.