ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಪರಿಸ್ಥಿತಿ ರಾತ್ರೋರಾತ್ರಿ ಬದಲಾಗುವುದಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರಾವಣೆ. ಗುರುವಾರ ಹೇಳಿದ್ದಾರೆ.
ಉಭಯ ದೇಶಗಳ ನಡುವಣ ಅಪನಂಬಿಕೆ, ಅನುಮಾನ ದಶಕಗಳಿಂದ ಮುಂದುವರಿದಿದ್ದು, ಎರಡು ದೇಶಗಳ ನಡುವೆ ವಿಶ್ವಾಸ ವೃದ್ದಿಸಬೇಕಾದರೆ ಪಾಕಿಸ್ತಾನ ನಮ್ಮ ದೇಶಕ್ಕೆ ಭಯೋತ್ಪಾದಕರ ರವಾನಿಸುವುದನ್ನು ನಿಲ್ಲಿಸಬೇಕು. ಕದನ ವಿರಾಮ ಒಪ್ಪಂದಕ್ಕೆ ಬದ್ಧವಾಗಿರಬೇಕು. ನಂಬಿಕೆ, ವಿಶ್ವಾಸ ಮೂಡಿಸುವ ಸಂಪೂರ್ಣ ಜವಾಬ್ದಾರಿ ಪಾಕಿಸ್ತಾನದ ಮೇಲಿದೆ ಎಂದು ಅವರು ತಿಳಿಸಿದರು.
ಜನರಲ್ ನರಾವಣೆ ಜಮ್ಮು ಹಾಗೂ ಕಾಶ್ಮೀರದ ಭದ್ರತಾ ಪರಿಸ್ಥಿತಿಯನ್ನು ಗುರುವಾರ ಪರಿಶೀಲಿಸಿದರು. ಭಯೋತ್ಪಾದಕ ಒಳನುಸುಳುವಿಕೆ ಪ್ರಯತ್ನಗಳನ್ನು ವಿಫಲಗೊಳಿಸಲು ತೆಗೆದುಕೊಳ್ಳುತ್ತಿರುವ ಕ್ರಮಗಳ ಬಗ್ಗೆ ಸ್ಥಳೀಯ ಕಮಾಂಡರ್‌ಗಳು ಸೇನಾ ಮುಖ್ಯಸ್ಥರಿಗೆ ವಿವರಿಸಿದರು. ಜನರಲ್ ನರಾವಣೆ ಯೋಧರೊಂದಿಗೆ ಮಾತನಾಡಿದರು.
ಸೇನೆಗೆ ಶ್ಲಾಘನೆ
ಕಾರ್ಯಾಚರಣೆಗೆ ಸದಾ ಸನ್ನದ್ದ ಸ್ಥಿತಿಯಲ್ಲಿರುವುದಕ್ಕೆ ಶ್ಲಾಘಿಸಿದರು. ಭಾರತದೊಂದಿಗೆ, ಪಾಕ್ ಉತ್ತಮ ಸಂಬಂಧ ಬಯಸುವುದಾದರೆ ಮೊದಲು ಪಾಕಿಸ್ತಾನ ಭಯೋತ್ಪಾದಕ ಸಂಘಟನೆಗಳ ಮೂಲಸೌಕರ್ಯಗಳನ್ನು ನಾಶಪಡಿಸಬೇಕು ಎಂದು ಜನರಲ್ ನರಾವಣೆ ಇತ್ತೀಚೆಗೆ ಹೇಳಿದ್ದರು. ಉಭಯ ದೇಶಗಳ ಸೇನೆಗಳ ನಡುವಿನ ಕದನ ವಿರಾಮ ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ ಭದ್ರತೆಯ ಉತ್ತಮ ಸಂಕೇತವಾಗಿದೆ ಎಂದು ಅವರು ಹೇಳಿದರು. ಪರೋಕ್ಷ ಸಮರವನ್ನು ಪ್ರಚೋದಿಸುವ ತನ್ನ ನೀತಿಗಳನ್ನು ತ್ಯಜಿಸಬೇಕೆಂದು ಅವರು ಪಾಕಿಸ್ತಾನಕ್ಕೆ ಕರೆ ಒತ್ತಾಯಿಸಿದರು.