HEALTH TIPS

ಶಾಲಾ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿಸಿದ ವಾಟ್ಸಪ್ಪ್ ಗುಂಪು

               ಬದಿಯಡ್ಕ: ಹಳೆ ವಿದ್ಯಾರ್ಥಿ ಜೀವನದ ನೆನಪುಗಳನ್ನು ಮೆಲುಕುಹಾಕಲು ಹುಟ್ಟಿಕೊಂಡ ಜ್ಞಾನೋದಯ ಶಾಲೆಯ ಹಳೆವಿದ್ಯಾರ್ಥಿ ಗಳ ವಾಟ್ಸಪ್ಪ್  ಗುಂಪೆÇಂದು ಪ್ರಸ್ತುತ ಪರಿಸ್ಥಿತಿಯಲ್ಲಿ ಆನ್ಲೈನ್ ಕಲಿಕೆಗೆ ಸಂಪನ್ಮೂಲದ ಕೊರತೆಯಿಂದಾಗಿ ವಂಚಿತರಾಗಲಿದ್ದ 11 ಮಕ್ಕಳ ಕಲಿಕೆಗೆ ನೆರವಾಗಿದ್ದಾರೆ.

          ಮಾನ್ಯ ಜ್ಞಾನೋದಯ ಶಾಲೆಯ ಹಳೆ ವಿದ್ಯಾರ್ಥಿಗಳ ವಾಟ್ಸಪ್ಪ್ ಗುಂಪಾದ " ಕನ್ನಡ ಶಾಲೆಯ ಮಕ್ಕಳು " ಈ ಮಾದರಿ ನೆರವನ್ನು ನೀಡಿ ಊರವರ , ಪೆÇೀಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 11 ಮಕ್ಕಳು ಆನ್ಲೈನ್ ಕಲಿಕೆಗಾಗಿ ಮೊಬೈಲ್ ಹೊಂದಿಸಲು ಪ್ರಯತ್ನಿಸುವುದನ್ನು ತಿಳಿದ ಈ ವಾಟ್ಸಪ್ಪ್ ಗುಂಪು ಕೇವಲ 2 ದಿನದ ಅವಧಿಯಲ್ಲಿ 11  ಮೊಬೈಲುಗಳಿಗೆ  ಬೇಕಾದ ಮೊತ್ತವನ್ನು ಸಂಗ್ರಹಿಸಿ , ಸ್ಪರ್ಧಾತ್ಮಕ ಬೆಲೆಗೆ ಉತ್ತಮ ಗುಣಮಟ್ಟದ ಮೊಬೈಲುಗಳನ್ನು ಖರೀದಿಸಿ ಶುಕ್ರವಾರ ನಡೆದ ಸರಳ ಸಮಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ  ಸುರೇಂದ್ರನ್ ಮಾಸ್ತರಿಗೆ ಹಸ್ತಾಂತರಿಸಿದರು. ಗುಂಪಿನ ಪ್ರತಿನಿಧಿಗಳಾಗಿ  ಕೆ ರಾಮ ಕಾರ್ಮಾರ್,  ಆಶಾ ಟೀಚರ್, ಸಂತೋಷ್ ಕುಮಾರ್ ಯಸ್ , ನಿತ್ಯಾನಂದ ಎಂ ಆರ್ , ಶ್ಯಾಂಪ್ರಸಾದ್ ಮಾನ್ಯ , ವಿಜಯಕುಮಾರ್ ಮಾನ್ಯ ಉಪಸ್ಥಿತರಿದ್ದರು. ಬಳಿಕ ನಡೆದ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅತಿಥಿಗಳು ಆನ್ಲೈನ್ ಕಲಿಕೆಯ ಮಹತ್ವ ಹಾಗೂ ಮೊಬೈಲ್ ಬಳಕೆಯ ಪ್ರಾಮುಖ್ಯತೆ ಗಳ ಬಗ್ಗೆ ಫಲಾನುಭವಿ ಮಕ್ಕಳ ಪೋಷಕರಿಗೆ ವಿವರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries