ಕೋಝಿಕ್ಕೋಡ್: ಪ್ರಕರಣದ ವಿಚಾರಣೆ ಮತ್ತು ತೀರ್ಪು ನ್ನು ವಿಧಿಸುವ ಮೂಲಕ ಅಸಾಮಾನ್ಯ ಕ್ರಮ ಕೈಗೊಂಡು ನ್ಯಾಯಾಲಯ ಅಚ್ಚರಿ ಮೂಡಿಸಿದೆ. ಕೋಝಿಕ್ಕೋಡ್ ಕುಂಡಂಗಲಂ ನ್ಯಾಯಾಲಯ ಈ ತೀರ್ಪು ನೀಡಿದೆ. ಕುಂದಮಂಗಲಂ ಪೋಲೀಸರು ಪ್ರಕರಣದ ಉಸ್ತುವಾರಿ ವಹಿಸಿದ್ದರು.
ಘಟನೆ ಏನು?:
ಕುಂದಮಂಗಲಂ ನ್ಯಾಯಾಲಯದಲ್ಲಿ ಗುರುವಾರ ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯದ ವಿಚಾರಣೆ ಆರಂಭವಾಯಿತು. ಆದರೆ ಹನ್ನೊಂದೂವರೆಯ ವೇಳೆಗೆ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಯಿತು. ವಿಚಾರಣೆಗೆ ಅಡ್ಡಿಯುಂಟುಮಾಡಿದ ಬಗ್ಗೆ ತನಿಖೆಗೆ ಮ್ಯಾಜಿಸ್ಟ್ರೇಟ್ ಆದೇಶಿಸಿದರು. ಕುಂದಮಂಗಲಂ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದಾಗ ಮಧ್ಯಾಹ್ನ 12 ಆಗಿತ್ತು.
ಆರೋಪಿಗಾಗಿ ಪೋಲೀಸರು ತನಿಖೆಗೆ ಆರಂಭಿಸಿ ನಿಮಿಷಗಳಲ್ಲಿ ವಶಕ್ಕೆ ಪಡೆದುಕೊಂಡರು. ಆರೋಪಿ ಒಂದು ಕೋಳಿಯಾಗಿತ್ತು. ವಿಚಾರಣೆ ಮತ್ತು ಶಿಕ್ಷೆ ಶೀಘ್ರವಾಗಿ ಮುಂದುವರಿಯಿತು. ಈ ಪ್ರಕರಣವನ್ನು ಐಪಿಸಿ 102 ರ ಅಡಿಯಲ್ಲಿ ದಾಖಲಿಸಲಾಗಿದೆ. ಪೋಲೀಸರು ಕೋಳಿಯ ಮಾಲೀಕರಿಗಾಗಿ ಶೋಧ ನಡೆಸಿದರೂ ಪತ್ತೆಹಚ್ಚಲಾಗಲಿಲ್ಲ. ಕೊನೆಗೆ ಸಂಜೆ ಹರಾಜು ಹಾಕಲಾಯಿತು.
ಹೆಚ್ಚಿನ ಜನರಿಗೆ ಹರಾಜಿನ ಬಗ್ಗೆ ತಿಳಿದಿಲ್ಲದ ಕಾರಣ ಹರಾಜಿನಲ್ಲಿ ಭಾಗವಹಿಸಲು ಬಹಳ ಕಡಿಮೆ ಜನರಿದ್ದರು. ಅಂತಿಮವಾಗಿ, ಬೇಪೆÇೀರ್‍ನ ಮುಖೇಶ್ ಅವರು ಸ್ಥಳೀಯ ಕೋಳಿಯನ್ನು 100 ರೂ.ವಿಗೆ ಖರೀದಿಸಿದರು.
ವಿಷಯವೆಂದರೆ:
ನ್ಯಾಯಾಲಯದ ಕಾರ್ಯಕಲಾಪಗಳು ಆರಂಭವಾದ ಸ್ವಲ್ಪಹೊತ್ತಲ್ಲಿ ನ್ಯಾಯಾಲಯದೊಳಗೆ ಕೋಳಿ ಹಾರಿ ಬಂದಿತು. ಸಿಬ್ಬಂದಿಗಳು ಓಡಿಸಲು ಯತ್ನಿಸಿದರೂ ಅದು ಹಾರಾಡುತ್ತಾ ನ್ಯಾಯಾಲಯದ ಪೂರ್ತಿ ಗೊಂದಲ ಸೃಷ್ಟಿಸಿತು. ಇದರಿಂದ ಕಾರ್ಯಕಲಾಪಗಳಿಗೆ ಅಡ್ಡಿಯಾಗಿ ನ್ಯಾಯಾಧೀಶರು ವಿಚಲಿತಗೊಂಡು ಬಂಧಿಸಲು ಆದೇಶವಿತ್ತರು.