ತಿರುವನಂತಪುರ: ಕೊರೋನಾ ವಿಸ್ತರಣೆಯ ಹಿನ್ನೆಲೆಯಲ್ಲಿ ಜಾರಿಗೆ ತರಲಾದ ಲಾಕ್‍ಡೌನ್ ನಲ್ಲಿ ಇನ್ನಷ್ಟು ರಿಯಾಯಿತಿಗಳನ್ನು ಪರಿಶೀಲಿಸಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಇಂದು(ಮಂಗಳವಾರ) ಪರಿಶೀಲನಾ ಸಭೆ ನಡೆಯಲಿದೆ. ಬುಧವಾರ ನಿಗದಿಯಾಗಿದ್ದ ಸಭೆಯನ್ನು ಇಂದಿಗೆ ಮರು ನಿಗದಿಪಡಿಸಲಾಗಿದೆ.
ನಿನ್ನೆ ರಾಜ್ಯದ ಕೊರೋನಾ ಪರೀಕ್ಷಾ ಸಕಾರಾತ್ಮಕತೆ ಪ್ರಮಾಣ 10 ಕ್ಕಿಂತ ಕಡಿಮೆಯಿತ್ತು. ಈ ಹಿನ್ನೆಲೆಯಲ್ಲಿ ಒಂದು ದಿನ ಮುಂಚಿತವಾಗಿ ಸಭೆಗೆ ಸೇರಲು ನಿರ್ಧರಿಸಲಾಯಿತು. ಸಭೆಯ ನಂತರ ಹೆಚ್ಚಿನ ವಿನಾಯಿತಿಗಳನ್ನು ಘೋಷಿಸಬಹುದು ಎಂದು ತಿಳಿದುಬಂದಿದೆ.
ಪ್ರಸ್ತುತ, ಎ ಮತ್ತು ಬಿ ವರ್ಗದ ಸ್ಥಳಗಳಲ್ಲಿ ಹೆಚ್ಚಿನ ವಿನಾಯಿತಿಗಳಿವೆ. ರಿಯಾಯಿತಿಗಳನ್ನು ಹೆಚ್ಚಿನ ಸ್ಥಳಗಳಿಗೆ ವಿಸ್ತರಿಸುವ ಅಗತ್ಯವನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಟಿಪಿಆರ್ 16 ಸ್ಥಳಗಳಲ್ಲಿ 30 ಕ್ಕಿಂತ ಹೆಚ್ಚಿದೆ. ರಿಯಾಯಿತಿ ನೀಡಲಾದ ಪ್ರದೇಶಗಳಲ್ಲಿ ಕಳೆದ ಒಂದು ವಾರದಿಂದ ಟಿಪಿಆರ್ ಏರಿಕೆಯಾಗಿಲ್ಲ. ಆದ್ದರಿಂದ, ಹೆಚ್ಚಿನ ರಿಯಾಯಿತಿಗಳನ್ನು ನೀಡುವುದರಿಂದ ಸೋಂಕು ಹರಡುವಿಕೆ ಹೆಚ್ಚಾಗುವುದಿಲ್ಲ ಎಂದೇ ಪರಿಭಾವಿಸಲಾಗಿದೆ.
ರಾಜ್ಯದಲ್ಲಿ ರಿಯಾಯಿತಿಗಳೊಂದಿಗೆ, ಆರಾಧನಾಲಯಗಳನ್ನು ತೆರೆಯಲು ಬೇಡಿಕೆ ಹೆಚ್ಚುತ್ತಿದೆ. ಸಭೆಯಲ್ಲಿ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಶಿಸಲಾಗಿದೆ.