ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆ ಮುಖಾಂತರ ವಿದ್ಯಾರ್ಥಿಗಳಿಗೆ ಮೊಬೈಲ್ ಪೋನ್ ವಿತರಿಸಲಾಗುತ್ತಿದೆ ಮತ್ತು ಈ ಬಗ್ಗೆ ಅರ್ಜಿ ಕೋರಲಾಗಿದ್ದು, ಮಾದರಿಯನ್ನೂ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದು ಹುಸಿ ಸಂದೇಶವಾಗಿದ್ದು, ಇದನ್ನು ನಂಬಕೂಡದು ಎಂದು ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಅಧಿಕಾರಿ ಎಸ್.ಮೀನಾರಾಣಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಆನ್ ಲೈನ್ ಕಲಿಕೆಗೆ ತೊಡಕಾಗದಂತೆ ಪರಿಹಾರಕ್ಕೆ ಕ್ರಮ ನಡೆಸಲಾಗುತ್ತಿದೆ. ಆದರೆ ಮೊಬೈಲ್ ಫೆÇೀನ್ ವಿತರಣೆ ಮತ್ತು ಈ ಬಗ್ಗೆ ಅರ್ಜಿ ಸಂಬಂಧ ಹರಡುತ್ತಿರುವ ಸಂದೇಶ ಸತ್ಯವಲ್ಲ ಎಂದವರು ನುಡಿದರು.