HEALTH TIPS

'ನಕಲಿ ಆಕ್ಸಿಮೀಟರ್‌ ಆಯಪ್‌ಗಳನ್ನು ಬಳಸಬೇಡಿ'

         ಚೆನ್ನೈದೇಶದಲ್ಲಿ ಕೋವಿಡ್‌ ಉಲ್ಬಣಗೊಳ್ಳುತ್ತಿದ್ದಂತೆ ಆಕ್ಸಿಮೀಟರ್‌ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನೇ ಅಸ್ತ್ರವನ್ನಾಗಿ ಬಳಸುತ್ತಿರುವ ಸೈಬರ್‌ ಕಳ್ಳರು ಗ್ರಾಹಕರ ಖಾಸಗಿ ಮಾಹಿತಿಯನ್ನು ಕದಿಯುತ್ತಿದ್ದಾರೆ. ಹಾಗಾಗಿ ಮೊಬೈಲ್‌ಗೆ ಆಕ್ಸಿಮೀಟರ್‌ಗೆ ಸಂಬಂಧಿಸಿದ ನಕಲಿ ಆಯಪ್‌ಗಳನ್ನು ಡೌನ್‌ಲೋಡ್‌ ಮಾಡಬೇಡಿ. ಈ ಅಪ್ಲಿಕೇಷನ್‌ಗಳು ಮೊಬೈಲ್‌ನಿಂದ ನಿಮ್ಮ ಖಾಸಗಿ ಮಾಹಿತಿ ಮತ್ತು ಬಯೋಮೆಟ್ರಿಕ್ ಡೇಟಾವನ್ನು ಕದಿಯುವ ಸಾಧ್ಯತೆಗಳಿವೆ ಎಂದು ತಮಿಳುನಾಡು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

            ಲಿಂಕ್‌ಗಳನ್ನು ಒಳಸಿಕೊಂಡು ಗ್ರಾಹಕರ ಖಾಸಗಿ ಮಾಹಿತಿ ಮತ್ತು ಬೆರಳಚ್ಚುನಂತಹ ಮಾಹಿತಿಯನ್ನು ಕದಿಯಲಾಗುತ್ತದೆ.

         ಆಮ್ಲಜನಕದ ಪ್ರಮಾಣವನ್ನು ಪತ್ತೆ ಹಚ್ಚುವುದಾಗಿ ಪ್ರತಿಪಾದಿಸುವ ನಕಲಿ ಆಕ್ಸಿಮೀಟರ್‌ ಆಯಪ್‌ಗಳ ಮೂಲಕ ಗ್ರಾಹಕರ ಖಾಸಗಿ ಮಾಹಿತಿಗಳನ್ನು ಕದಿಯಲಾಗುತ್ತಿದೆ. ಈ ಆಯಪ್‌ಗಳು ಬೆರಳಚ್ಚು ಮೂಲಕ ಆಮ್ಲಜನಕದ ಪ್ರಮಾಣವನ್ನು ಪರಿಶೀಲಿಸಿ, ಎಸ್‌ಎಂಎಸ್‌ ಮೂಲಕ ಅದರ ಫಲಿತಾಂಶವನ್ನು ನೀಡುತ್ತದೆ. ಇದಕ್ಕೂ ಮುನ್ನ ಹಲವು ಫೀಚರ್‌ಗಳನ್ನು ಬಳಸಲು ಅನುಮತಿಯನ್ನು ಕೇಳುತ್ತದೆ.

           'ಒಂದು ವೇಳೆ ಅನುಮತಿ ಸಿಕ್ಕಲ್ಲಿ ಒಟಿಪಿ, ಪಾಸ್‌ವರ್ಡ್‌ಗಳು, ಕಾರ್ಡ್‌ ಮಾಹಿತಿ, ಫೋಟೊ ಮತ್ತು ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿಗಳನ್ನು ಸುಲಭವಾಗಿ ಕದಿಯಬಹುದಾಗಿದೆ. ಅಲ್ಲದೆ ಕದೀಮರು, ಇತರೆ ಆಯಪ್‌ಗಳ ಮೂಲಕ ಆಧಾರ ಕಾರ್ಡ್‌ನ ಮಾಹಿತಿಯನ್ನು ಸಂಗ್ರಹಿಸುತ್ತಾರೆ' ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

       'ಈಗಾಗಲೇ ಮಹಾರಾಷ್ಟ್ರ, ಗುಜರಾತ್‌ ಸರ್ಕಾರ ಈ ಬಗ್ಗೆ ಎಚ್ಚರಿಕೆ ನೀಡಿದೆ. ಹೀಗಾಗಿ, ಆಯಪ್‌ಗಳನ್ನು ಸರಿಯಾದ ಮೂಲಗಳಿಂದ ಡೌನ್‌ಲೋಡ್‌ ಮಾಡಿ' ಎಂದು ತಮಿಳುನಾಡು ಪೊಲೀಸರು ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

                    ಈ ಸಂಬಂಧ www.cybercrime.gov.in. ದೂರು ಸಲ್ಲಿಸಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries