ಕಾಸರಗೋಡು: ಕೋವಿಡ್ ರೋಗಿಗಳಿಗೆ ಹಾಗೂ ರೋಗಮುಕ್ತಿ ಹೊಂದಿದವರಿಗಾಗಿ ಆಮ್ಲಜನಕ ಪೂರೈಸುವ ನಿಟ್ಟಿನಲ್ಲಿ ಸೇವಾಭಾರತೀ ವತಿಯಿಂದ ಕಾಸರಗೋಡು ಜನರಲ್ ಆಸ್ಪತ್ರೆಗೆ ಆಕ್ಸಿಜನ್ ಕಾನ್ಸಂಟ್ರೇಟರ್‍ಗಳನ್ನು ಕೊಡುಗೆಯಾಗಿ ನೀಡಲಾಯಿತು. ಸೇವಾಭಾರತಿಯ ಅಂತಾರಾಷ್ಟ್ರೀಯ ಘಟಕ ಸೇವಾ ಇಂಟರ್‍ನ್ಯಾಶನಲ್ ಕಾನ್ಸಂಟ್ರೇಟರ್‍ಗಳನ್ನು ಪೂರೈಸಿದೆ.
ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ಎರಡು ಕಾನ್ಸಂಟ್ರೇಟರ್‍ಗಳನ್ನು ಜನರಲ್ ಆಸ್ಪತ್ರೆ ಮೇಲ್ವಿಚಾರಕ ಡಾ. ರಾಜಾರಾಮ್ ಅವರಿಗೆ ಹಸ್ತಾಂತರಿಸಿದರು. ಆರೆಸ್ಸೆಸ್ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಮುಖ್ ಇ.ಬಾಲಕೃಷ್ಣನ್, ಬಿಜೆಪಿ ಮುಖಂಡರಾದ ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ಯುವಮೋಚಾದ ಅಜಿತ್ ಕುಮಾರ್, ಹರೀಶ್ ಗೋಸಾಡ ಉಪಸ್ಥಿತರಿದ್ದರು.