ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ ಕನ್ನಡ ವಿಭಾಗದ ಆಯೋಗದಲ್ಲಿ ಸರಣಿ ಉಪನ್ಯಾಸ ‘ಸಾಹಿತ್ಯಯಾನ’ ದ ಐದನೇ ಉಪನ್ಯಾಸ ಕಾರ್ಯಕ್ರಮವು ಇಂದು ಸಂಜೆ(ಜೂ.23) 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ. ‘ಕಾಸರಗೋಡಿನ ಹವ್ಯಾಸಿ ರಂಗಭೂಮಿ" ಎನ್ನುವ ವಿಷಯದಲ್ಲಿ ರಂಗಕರ್ಮಿ, ನಟ ಹಾಗೂ ಚಲನಚಿತ್ರ ನಿರ್ದೇಶಕ ಕಾಸರಗೋಡು ಚಿನ್ನಾ ಅವರು ಉಪನ್ಯಾಸ ನೀಡಲಿದ್ದಾರೆ. ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡುವರು. ಮುಖ್ಯ ಅತಿಥಿಗಳಾಗಿ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗ ಮುಖ್ಯಸ್ಥ ಪ್ರೊ.ಅಮೃತ್ ಜಿ.ಕುಮಾರ್ ಮಾತನಾಡುವರು.
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಯೋಜಕ, ಅತಿಥಿ ಸಹಾಯಕ ಪ್ರಾಧ್ಯಾಪಕ ಮಹೇಶ್ ಎಂ ವಿನಂತಿಸಿಕೊಂಡಿದ್ದಾರೆ. ಗೂಗಲ್ ಮೀಟ್ ವಿಳಾಸ: https://meet.google.com/-xnx-xkop-oxo