HEALTH TIPS

ನಾಡಿನ ಹಿರಿಯ ವಿದ್ವಾಂಸ ಪಿ.ರಾಜಗೋಪಾಲ ಪುಣಿಚಿತ್ತಾಯ ವಿಧಿವಶ

            ಮುಳ್ಳೇರಿಯ: ಪುಂಡೂರು ಮನೆತನದ ಹಿರಿಯರೂ, ಸಂಸ್ಕøತ, ಕನ್ನಡ ವಿದ್ವಾಂಸರೂ, ಗಮಕಿಗಳೂ, ಜನಪ್ರಿಯ ನಾಟಕ, ಹಾಸ್ಯ ಕಲಾವಿದರೂ, ಶ್ರೀ ಎಡನೀರು ಮಠದ ಆಪ್ತರೂ, ಕೃಷಿಕರೂ ಆದ ಪಿ.ರಾಜಗೋಪಾಲ ಪುಣಿಂಚತ್ತಾಯ(86) ಅವರು ವಯೋ ಸಹಜ ಅನಾರೋಗ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೂ.4 ರಂದು ನಿಧನ ಹೊಂದಿದರು.

           ಮುಳ್ಳೇರಿಯಾ ಯು.ಪಿ. ಶಾಲೆಯಲ್ಲಿ ಅನೇಕ ವರ್ಷಗಳ ಕಾಲ ಸಂಸ್ಕøತ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ಪೈಕ, ಎಡನೀರು ಸ್ವಾಮೀಜೀಸ್ ಹೈಸ್ಕೂಲುಗಳಲ್ಲಿ ಹಿಂದಿ ಹಾಗೂ ಸಂಸ್ಕøತ ಅಧ್ಯಾಪಕರಾಗಿ ಜನಾನುರಾಗಿಗಳಾಗಿದ್ದರು.  1990 ರಲ್ಲಿ ನಿವೃತ್ತರಾದ ನಂತರವೂ ಮುಳ್ಳೇರಿಯಾದಲ್ಲಿ ಸಂಸ್ಕøತ ಅಧ್ಯಾಪಕ ತರಬೇತಿ ಕೇಂದ್ರವನ್ನು ಸ್ಥಾಪಿಸಿ ಅದರ ಪ್ರಾಂಶುಪಾಲರಾಗಿ ದುಡಿದು ಕಾಸರಗೋಡಿನ ಕನ್ನಡಿಗರಿಗೂ ಈ ಊರಿನಲ್ಲಿ ಸಂಸ್ಕøತ ಅಧ್ಯಾಪಕರಾಗಲು ಅನುಕೂಲ ಮಾಡಿಕೊಟ್ಟಿದ್ದಾರೆ. ಅನೇಕ ಕೃತಿಗಳನ್ನು ಬರೆದಿರುವ ಪುಣಿಚಿತ್ತಾಯರಿಗೆ ಹಲವು ಪ್ರಶಸ್ತಿ ಗೌರವಗಳೂ ಪ್ರಾಪ್ತವಾಗಿವೆ. ಹಿರಿಯ ಸಾಹಿತಿ, ತುಳು ಲಿಪಿ ಸಂಶೋಧಕ ದಿ. ವೆಂಕಟರಾಜ ಪುಣಿಚಿತ್ತಾಯರ ಸಹೋದರರೂ ಆಗಿದ್ದಾರೆ.     

                    ಮೃತರು ಪತ್ನಿ, ಇಬ್ಬರು ಪುತ್ರರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries