ಕಾಸರಗೋಡು: ಹೊಸ ತಲೆಮಾರಿನ ಕವಯಿತ್ರಿ ಲಿಬಾನಾ ಜಲೀಲ್ ಅವರ ಇಂಗ್ಲಿಷ್ ಕವನ ಸಂಕಲನ 'ಡಿಸೈರ್ ಡ್ರೀಮ್ ಡೇರ್' ಇತ್ತೀಚೆಗೆ ಬಿಡುಗಡೆಗೊಂಡಿತು. ರಾಜ್ಯ ಬಂದರು ಸಚಿವ ಅಹ್ಮದ್ ದೇವರ್ಕೋವಿಲ್ ಅವರು ಕಾಞಂಗಾಡ್ ಮುನ್ಸಿಪಲ್ ಮಾಜಿ ಅಧ್ಯಕ್ಷ ವಿ.ವಿ.ರಮೇಶನ್ ಅವರಿಗೆ ಹಸ್ತಾಂತರಿಸಿ ಬಿಡುಗಡೆಗೊಳಿಸಿದರು. ಜನಪ್ರಿಯ ಬರಹಗಾರರಾಗಿರುವ ಲಿಬಾನಾ ಜಲೀಲ್ ಹೊಸ ತಲೆಮಾರಿನ ಸಾಮಾಜಿಕ ಮಾಧ್ಯಮ ಬಳಕೆದಾರರಿಗೆ ಆದರ್ಶಪ್ರಾಯರಾಗಿ ಚಿರಪರಿಚಿತರು. ಸಾಧ್ಯವಿರುವ ಎಲ್ಲ ರೀತಿಯಲ್ಲಿ ಪೆÇ್ರೀತ್ಸಾಹಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಿಕೆ ನಾಯರ್ ಆಟ್ರ್ಸ್ ಅಂಡ್ ಸೈನ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎ ಇಂಗ್ಲಿಷ್ ವಿದ್ಯಾರ್ಥಿನಿಯಾಗಿರುವ ಲಿಬಾನಾ ಐಎಂಸಿಸಿ ನಾಯಕ ಮತ್ತು ಯುವ ಉದ್ಯಮಿ ಜಲೀಲ್ ಪಡನ್ನಕ್ಕಾಡ್ ಅವರ ಪುತ್ರಿ. ಈ ಸಂದರ್ಭದಲ್ಲಿ ಪ್ರಮುಖ ಪತ್ರಕರ್ತ ಮತ್ತು ಬರಹಗಾರ ಕಾಸಿಂ ಎರಿಕೂರ್, ಎಂ.ಎ.ಲತೀಫ್, ಅಜೀಜ್ ಕಡಪ್ಪುರಂ, ಹನೀಫಾ ಹಡ್ಡಾದ್ ಮತ್ತು ಕಾಞಂಗಾಡ್ ಮುನ್ಸಿಪಲ್ ಉಪಾಧ್ಯಕ್ಷ ಅಬ್ದುಲ್ಲ ಬಿಲ್ಟೆಕ್ ಉಪಸ್ಥಿತರಿದ್ದರು.