ನವದೆಹಲಿ: ಕಳೆದ ತಿಂಗಳು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದು ನೆಗೆಟಿವ್ ಆಗಿದ್ದ 'ಫ್ಲೈಯಿಂಗ್ ಸಿಖ್' ಖ್ಯಾತಿಯ ಮಿಲ್ಖಾ ಸಿಂಗ್ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಅವರು ಜ್ವರಪೀಡಿತರಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಅನಿರೀಕ್ಷಿತವಾಗಿ ಜ್ವರ ಪೀಡಿತರಾಗಿದ್ದು, ಈ ವೇಳೆ ಆಮ್ಲಜನಕ ಮಟ್ಟದಲ್ಲೂ ಕುಸಿತ ಕಂಡು ಬಂದಿತ್ತು. 91 ರ ಹರೆಯದ ಮಿಲ್ಖಾ ಸಿಂಗ್ ರನ್ನು ತೀವ್ರ ನಿಗಾಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಅವರ ಪತ್ನಿ ಇತ್ತೀಚೆಗೆ ಕೋವಿಡ್ ನಿಂದ ಮೃತಪಟ್ಟಿದ್ದರು.
ಶುಕ್ರವಾರ ರಾತ್ರಿ 11:30ಕ್ಕೆ ಮಿಲ್ಖಾ ಸಿಂಗ್ ಮೃತಪಟ್ಟಿದ್ದಾಗಿ ಅವರ ಕುಟುಂಬ ತಿಳಿಸಿದೆ. ಮಿಲ್ಖಾ ಸಿಂಗ್ ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.