ತಿರುವನಂತಪುರ: ರಾಜ್ಯದಲ್ಲಿ ಕೊರೋನಾ ಸಾವಿನ ಪ್ರಮಾಣದ ಗಣನೆಯಲ್ಲಿ ಬದಲಾವಣೆಯಾಗಲಿದೆ. ಇದನ್ನು ರಾಜ್ಯಮಟ್ಟದಿಂದ ಜಿಲ್ಲಾ ಮಟ್ಟದ ಸಮಿತಿಗೆ ವರ್ಗಾಯಿಸುವ ಯೋಜನೆ ಇದೆ. ಸಾವಿನ ವರ್ಗವನ್ನು ವೈದ್ಯರು ನಿರ್ಧರಿಸುತ್ತಾರೆ. ಗುರುವಾರ ಮುಖ್ಯಮಂತ್ರಿಯ ಪರಿಶೀಲನಾ ಸಭೆಯಲ್ಲಿ ಈ ವಿಷಯವನ್ನು ಪ್ರಕಟಿಸಲಾಯಿತು. ಪ್ರಸ್ತುತ ವ್ಯವಸ್ಥೆಯನ್ನು ಬದಲಾಯಿಸಬೇಕೆಂದು ಪ್ರತಿಪಕ್ಷಗಳು ಒತ್ತಾಯಿಸಿದ್ದವು.
ಕೊರೋನಾ ಸಾವುಗಳು ಪ್ರಸ್ತುತ ರಾಜ್ಯ ಮಟ್ಟದಲ್ಲಿ ದೃಢಪಡಿಸಲಾಗುತ್ತಿದೆ. ಈ ವ್ಯವಸ್ಥೆಯಲ್ಲಿ ಇನ್ನು ಬದಲಾವಣೆ ನಡೆಯಲಿದೆ. ಇದರೊಂದಿಗೆ ಕೊರೊನಾ ಪೂರ್ವ ಆರೋಗ್ಯ ಸಮಸ್ಯೆಗಳಿಂದ ಮೃತರಾಗುವವÀರಿಗೂ ಸರ್ಕಾರವು ಪರಿಹಾರ ನೆರವನ್ನು ನೀಡಲಿದೆ. ಮುಖ್ಯಮಂತ್ರಿಯ ನಿರ್ಧಾರವನ್ನು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಸ್ವಾಗತಿಸಿರುವರು.
ಕೊರೋನದ ಮೂರನೇ ತರಂಗವನ್ನು ಎದುರಿಸಲು ಕ್ರಮಗಳನ್ನು ಪ್ರಾರಂಭಿಸಿದೆ ಎಂದು ಸಿಎಂ ಕಚೇರಿ ಹೇಳಿದೆ. ರೋಗಲಕ್ಷಣಗಳಲ್ಲಿನ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಮತ್ತು ಆನುವಂಶಿಕ ಅಧ್ಯಯನಗಳನ್ನು ನಡೆಸುತ್ತದೆ ಎಂದು ಕಚೇರಿ ಹೇಳಿದೆ. ಈ ಮಧ್ಯೆ, ನಿನ್ನೆ ರಾಜ್ಯದಲ್ಲಿ 18,853 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 153 ಜನರು ಸಾವನ್ನಪ್ಪಿದ್ದಾರೆ.