ತಿರುವನಂತಪುರ: ಯುಡಿಎಫ್ ಕನ್ವೀನರ್ ಹುದ್ದೆಯಿಂದ ತನ್ನನ್ನು ತೆರವುಗೊಳಿಸುವ ಬಗ್ಗೆ ಯಾರೂ ಹೇಳಿಲ್ಲ ಎಂದು ಯುಡಿಎಫ್ ಕನ್ವೀನರ್ ಎಂ.ಎಂ.ಹಸನ್ ಹೇಳಿದ್ದಾರೆ.
ಕನ್ವೀನರ್ ನ್ನು ವಜಾಗೊಳಿಸುವ ವಿಧಾನ ಸರಿಯಾಗಿಲ್ಲದಿದ್ದರೆ, ತಾನು ಪ್ರತಿಕ್ರಿಯಿಸುವುದಾಗಿ ಯುಡಿಎಫ್ ಕನ್ವೀನರ್ ಹೇಳಿದರು. ಹೊಸ ಸ್ಥಾನಮಾನವನ್ನು ನೀಡುವುದು ಜವಾಬ್ದಾರಿಯುತ ವ್ಯಕ್ತಿಗಳದ್ದಾಗಿದೆ ಎಂದು ಅವರು ಹೇಳಿದರು. ಹೊಸ ವಿರೋಧ ಪಕ್ಷದ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆಗೆ ಯುಡಿಎಫ್ ಕನ್ವೀನರ್ ಸ್ಥಾನದಲ್ಲಿ ಬದಲಾವಣೆಯಾಗಲಿದೆ ಎಂಬ ವರದಿಗಳ ಮಧ್ಯೆ ಹಸನ್ ಅವರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೆ ಮುರಲೀಧರನ್ ಅವರನ್ನು ಯುಡಿಎಫ್ ಕನ್ವೀನರ್ ಆಗಿ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ವರದಿಗಳಾಗಿದ್ದವು. ಈ ಹಿಂದೆ ಯುಡಿಎಫ್ ಕನ್ವೀನರ್ ಹುದ್ದೆಗೆ ತಿರುವಾಂಜೂರು ರಾಧಾಕೃಷ್ಣನ್ ಸೇರಿದಂತೆ ನಾಯಕರ ಹೆಸರನ್ನು ಪರಿಗಣಿಸಲಾಗಿತ್ತು.
ಇತರ ನಾಯಕರು ನೇಮಂ ವಿಧಾನಸಭಾ ಸ್ಥಾನದಲ್ಲಿ ಕುಮ್ಮನಂ ರಾಜಶೇಖರಂ ಅವರಿಗೆ ಎದುರಾಳಿಯಾಗಿ ಸ್ಪರ್ಧಿಸಲು ಸಿದ್ಧರಿಲ್ಲದಿದ್ದಾಗ ಸಂಸತ್ ಸದಸ್ಯ ಕೆ.ಮುರಲೀಧರನ್ ಅವರನ್ನು ಬಿಜೆಪಿಗೆ ಎದುರಾಳಿಯಾಗಿ ಕಣಕ್ಕಿಳಿಸಲಾಗಿತ್ತು. ಈ ಪರಿಸ್ಥಿತಿಯಲ್ಲಿ ಹೈ ಕಮಾಂಡ್ ಮುರಲೀಧರನ್ ಅವರಿಗೆ ಉತ್ತಮ ಸ್ಥಾನವನ್ನು ನೀಡುತ್ತದೆ ಎಂಬ ವರದಿಗಳು ಕೇಳಿ ಬಂದಿವೆ. ಹೊಸ ವರದಿಗಳು ಈ ಬಗ್ಗೆ ಖಚಿತತೆಯನ್ನೂ ನೀಡಿದೆ.
ಇದೇ ವೇಳೆ ಎಂ.ಎಂ. ಹಸನ್ ಅವರು ಕಾಂಗ್ರೆಸ್ನಲ್ಲಿ ಜಂಬೋ ಸಮಿತಿಗಳನ್ನು ಹೊಂದಿರದ ನಿರ್ಧಾರ ಉತ್ತಮವಾಗಿದೆ ಎಂದು ಹೇಳಿರುವರು. ರಮೇಶ್ ಚೆನ್ನಿತ್ತಲ ಅವರು ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿಗೆ ಪದೋನ್ನತಿ ಹೊಂದುವುದು ಒಳ್ಳೆಯದು ಎಂದು ಅವರು ಹೇಳಿದ್ದರು.