ಕೊಚ್ಚಿ: ಪತಿಯ ಮನೆಯಲ್ಲಿ ನೀಡಲಾಗುತ್ತಿರುವ ಕಿರುಕುಳದ ಬಗ್ಗೆ ದೂರು ನೀಡಲು ಕರೆ ಮಾಡಿದ ಮಹಿಳೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಎಂ.ಸಿ.ಜೋಸೆಫೀನ್ ನೀಡಿದ ಉತ್ತರ ವಿವಾದಕ್ಕೆಡೆಯಾಗಿದೆ. ಖಾಸಗಿ ಚಾನೆಲ್‍ನಲ್ಲಿ ಲೈವ್ ಶೋವೊಂದರಲ್ಲಿ ಕೌಟುಂಬಿಕ ಹಿಂಸಾಚಾರದ ಬಗ್ಗೆ ದೂರು ನೀಡಿದ ಯುವತಿಗೆ ಎಂಸಿ ಜೋಸೆಫೀನ್ ಅನ್ಯಾಯವಾಗಿ ಪ್ರತಿಕ್ರಿಯಿಸಿದ್ದಾರೆ. ಗಂಡನ ಮನೆಯಲ್ಲಿ ನಿಂದನೆಗೆ ಒಳಗಾಗುತ್ತಿರುವ ಮಹಿಳೆ ಪೋಲೀಸರಿಗೆ ದೂರು ನೀಡಿಲ್ಲ ಎಂದು ಜೋಸೆಫೀನ್ ಹೇಳಿದ್ದಾರೆ.
ನಾವು 2014 ರಲ್ಲಿ ವಿವಾಹವಾದವರು. ಪತಿ ವಿದೇಶಕ್ಕೆ ಹೋದ ಬಳಿಕ ಅತ್ತೆ ದೈಹಿಕವಾಗಿ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಜೊತೆಗೆ ಪತಿಯಿಂದಲೂ ಕಿರುಕುಳಕ್ಕೊಳ ನೀಡುತ್ತಾನೆ ಎಂದು ಒಬ್ಬಾಕೆ ಗೃಹಿಣಿ ಅವಲತ್ತುಕೊಂಡರು. ಇದನ್ನು ಆಲಿಸಿದ ತಕ್ಷಣ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಜೋಸೆಫೀನ್ ಅವರು ಪ್ರತಿಕ್ರಿಯಿಸಿ ಪೋಲೀಸರಿಗೆ ಏಕೆ ದೂರು ನೀಡಲಿಲ್ಲ ಎಂದು ಕೇಳಿದರು. ತಾನು ಯಾರಿಗೂ ಹೇಳಲಿಲ್ಲ ಎಂದು ಮಹಿಳೆ ಉತ್ತರಿಸಿರುವಳು. ಆದ್ದರಿಂದಲೇ ನೀವು ಇನ್ನಷ್ಟು ಕಿರುಕುಳಕ್ಕೆ ಒಳಗಾದಿರಿ. ಪತಿಯೊಂದಿಗೆ ವಾಸಿಸಲು ಬಯಸದಿದ್ದರೆ ವರದಕ್ಷಿಣೆ ಮತ್ತು ಪರಿಹಾರವನ್ನು ಮರಳಿ ಪಡೆಯಲು ಉತ್ತಮ ವಕೀಲರ ಮೂಲಕ ಕುಟುಂಬ ನ್ಯಾಯಾಲಯವನ್ನು ಸಂಪರ್ಕಿಸಲು ಜೋಸೆಫೀನ್ ಪುಕ್ಕಟೆ ಸಲಹೆಯನ್ನೂ ನೀಡಿದರು. ಅಗತ್ಯವಿದ್ದರೆ ಮಹಿಳಾ ಆಯೋಗಕ್ಕೆ ದೂರು ನೀಡಬೇಕು ಎಂದು ಎಂಸಿ ಜೋಸೆಫೀನ್ ಹೇಳಿದರು.
ಜೋಸೆಫೀನ್ ನೀಡಿದ ಉತ್ತರಕ್ಕೆ ಯುವತಿ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ ಮತ್ತು ಸಂಭಾಷಣೆಯನ್ನು ಕೊನೆಗೊಳಿಸಿದಳು. ಈ ವಿಡಿಯೋ ಬಿಡುಗಡೆಯಾದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಜೋಸೆಫೀನ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.