HEALTH TIPS

ಪದಗಳ ವಾಚ್ಯಾರ್ಥಕ್ಕಿಂತ ಅರ್ಥ ವಿಸ್ತಾರತೆಯೇ ಕನ್ನಡ ಭಾಷಾ ಸೊಗಸು: ಸಾಹಿತ್ಯ ಯಾನ ಎರಡನೇ ವೆಬಿನಾರ್ ಸರಣಿಯಲ್ಲಿ ಡಾ.ವಿ.ರಾಜೀವ್

   

             ಕಾಸರಗೋಡು: 'ದ್ರಾವಿಡÀ ಭಾಷೆಗಳೆಲ್ಲವೂ ಒಂದೇ ಮೂಲದಿಂದ ಹುಟ್ಟಿದ ಭಾಷೆಗಳು. ಆದರೆ ಕೆಲವೊಂದು ಆಂತರಿಕ ಹಾಗೂ ಬಾಹ್ಯ ಕಾರಣಗಳಿಂದ ಅವುಗಳು ಬೇರೆ ಬೇರೆ ಕಡೆಗಳಲ್ಲಿ ಬೆಳೆದುಬಂದುವು. ಈ ಸಹೋದರ ಸಂಬಂಧವು ಭಾಷೆಯ ಬಗೆಗಿನ ಅಧ್ಯಯನಗಳಿಗೆ ಸಾಕಷ್ಟು ಅವಕಾಶವನ್ನು ನೀಡುತ್ತವೆ. ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಈ ಬಗೆಯ ಅಧ್ಯಯನಗಳಿಗೆ ಅವಕಾಶಗಳನ್ನು ನೀಡಲಿ' ಎಂದು ಭಾಷೆ ಮತ್ತು ತೌಲನಿಕ ಸಾಹಿತ್ಯ ನಿಕಾಯದ ಮುಖ್ಯಸ್ಥ ಡಾ.ವಿ.ರಾಜೀವ್ ಅಭಿಪ್ರಾಯಪಟ್ಟರು. 

                ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ, ಕಾಸರಗೋಡಿನ  ಕನ್ನಡ ವಿಭಾಗವು ಆಯೋಜಿಸಿದ ಸರಣಿ ಉಪನ್ಯಾಸ 'ಸಾಹಿತ್ಯಯಾನ'ದ ಶನಿವಾರ ವೆಬಿನಾರ್ ಮೂಲಕ ನಡೆದ ಎರಡನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

            ಕೇಂದ್ರೀಯ ವಿ.ವಿ ಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ. ಮೋಹನ್ ಎ.ಕೆ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ 'ಕನ್ನಡವು ಬಹುಕಾಲದಿಂದ ಬೆಳೆದುಬಂದ ಭಾಷೆ. ಬದುಕುವುದಕ್ಕೆ ಹಲವು ಅವಕಾಶಗಳನ್ನು ನೀಡಿದೆ. 'ಅಭಿಜಾತ' ಎನ್ನುವ ಪದವು ಸಾಕಷ್ಟು ಚಿಂತನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ಪದಗಳು ಕೊಡುವ ವಾಚ್ಯಾರ್ಥಕ್ಕಿಂತಲೂ ಆಚೆಗೆ ಅದರ ಅರ್ಥ ತೆರೆದುಕೊಳ್ಳುವುದೇ ಕನ್ನಡ ಭಾಷೆಯ ಸೊಗಸುಗಳಲ್ಲೊಂದು' ಎಂಬುದಾಗಿ ಅಭಿಪ್ರಾಯಪಟ್ಟರು.

                 ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ "ಕೇಂದ್ರೀಯ ವಿ.ವಿ ಯಲ್ಲಿ ಕನ್ನಡ ವಿಭಾಗ ಆರಂಭವಾದದ್ದರ ಹಿಂದೆ ಕಾಸರಗೋಡಿನ ಹಿರಿಯ ಶಿಕ್ಷಣ ತಜ್ಞ ಪುರುಷೋತ್ತಮ ಬಿ, ನ್ಯಾಯವಾದಿ ಕೆ. ಶ್ರೀಕಾಂತ್ ಅವರ ಐದು ವರ್ಷದ ದುಡಿಮೆ ಇದೆ. ವಿಭಾಗ ಆರಂಭವಾಗಲು ನಡೆದ ಅವಿರತ ಪರಿಶ್ರಮವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡ ಅವರು, ಹಿರಿಯರ ಜತೆಗೆ ಒಡನಾಡಿದ ಸಂತಸವನ್ನು ವ್ಯಕ್ತಪಡಿಸಿದರು. 

                  'ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರಕಿರುವುದು ಭಾಷೆಯ ಹಿರಿಮೆಗೆ ಸಾಕ್ಷಿಯಾಗಿದೆ. ಭಾಷೆಯ ಪಾರಂಪರಿಕ ಅಂತಃಸತ್ವವನ್ನು ಎತ್ತಿ ನಿಲ್ಲಿಸುವ ಹಾಗೂ ಅದನ್ನು ಯುವ ತಲೆಮಾರಿಗೆ ದಾಟಿಸುವ ಕೆಲಸ ಬಹುಮುಖ್ಯವಾಗಿ ಆಗಬೇಕಿದೆ. ಹಳಗನ್ನಡ ಸಾಹಿತ್ಯ ಬಹಳ ಶ್ರೀಮಂತವಾಗಿದೆ. ಈ ಕ್ಷೇತ್ರದಲ್ಲಿ ವಿಪುಲವಾದ ಅಧ್ಯಯನ ಹಾಗೂ ಸಂಶೋಧನೆಗಳಿಗೆ ಅವಕಾಶಗಳಿವೆ. ಹಾಗಿದ್ದೂ ಹೊಸ ತಲೆಮಾರು ಹಳಗನ್ನಡದ ಬಗೆಗೆ ನಿರ್ಲಕ್ಷ್ಯ ತಾಳಿರುವುದು ಬಹಳ ವಿಷಾದನೀಯ' ಎಂದರು. 

          ಬಳಿಕ 'ಅಭಿಜಾತ ಕನ್ನಡ ಕಾವ್ಯ-ಸೊಗಸು' ಎನ್ನುವ ವಿಷಯದಲ್ಲಿ ಉಪನ್ಯಾಸ ನೀಡಿದರು. ಪ್ರಥಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಗಿರೀಶ್ ಎಂ ಸ್ವಾಗತಿಸಿ, ರೋಶ್ನಿ ಎಸ್ ವಂದಿಸಿದರು. ನಿವೇದಿತಾ ಕುಮಾರಿ ಬಿ ಕಾರ್ಯಕ್ರಮ ನಿರೂಪಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries