ಹಲಸಿನ ಹಣ್ಣಿನ ಸೀಸನ್‌ನ ಈ ಸಮಯದಲ್ಲಿ ಹಲಸಿನ ಹಿಟ್ಟು ಸವಿಯದಿರಲು ಸಾಧ್ಯವೇ? ಕೆಲವು ಕಡೆ ಇದನ್ನು ಹಲಸಿನ ಗಟ್ಟಿ ಎಂದು ಕೂಡ ಕರೆಯಲಾಗುವುದು. ಹಲಸಿನ ಹಣ್ಣಿನ ಸಮಯದಲ್ಲಿ ಎಷ್ಟೋ ಬಾರಿ ಬೆಳಗ್ಗಿನ ಬ್ರೇಕ್‌ಫಾಸ್ಟ್ ಅಥವಾ ಸಂಜೆಯ ಸ್ನ್ಯಾಕ್ಸ್ ಇದೇ ಆಗಿರುತ್ತದೆ.
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ಸವಿಯುವ ಈ ಗಟ್ಟಿ ಮಾಡುವುದು ಸ್ವಲ್ಪ ಶ್ರಮದ ಕೆಲಸವೇ, ಆದರೆ ನಾವಿಲ್ಲಿ ನಿಮ್ಮ ಶ್ರಮ ಕಡಿಮೆ ಮಾಡುವ ಟಿಪ್ಸ್ ಜೊತೆ ವಿವರಿಸಿದ್ದೇವೆ.. ಬನ್ನಿ ಹಲಸಿನ ಹಿಟ್ಟು ಮಾಡುವುದು ಹೇಗೆ ಎಂದು ನೋಡೋಣ:
ಸೂಚನೆ: ಬಕ್ಕೆಯಾದರೆ ರುಬ್ಬಬೇಕು, ಕೂಳೆಯಾದರೆ ಅದರ ರಸ ತೆಗೆದು ಮಾಡಬಹುದಾಗಿದೆ.
Recipe By: Reena TK
Recipe Type: sweet
Serves: 10
ಬೇಕಾಗುವ ಸಾಮಗ್ರಿ
2 ದೊಡ್ಡ ಕಪ್ ಹಲಸಿನ ತೊಳೆ
1 ಕಪ್ ಬೆಲ್ಲ
1 ಕಪ್ ತೆಂಗಿನ ತುರಿ
2 ಕಪ್ ಅಕ್ಕಿ ಹಿಟ್ಟು (ಕಡುಬಿಗೆ ಮಾಡುವಂತೆ ತರಿತರಿ ಇರಲಿ)
1 ಚಮಚ ಏಲಕ್ಕಿ
ಬಾಳೆಲೆ
ತುಪ್ಪ
ಹುರಿಗಡಲೆ (Optional)
* ಹಲಸಿನ ತೊಳೆಯನ್ನು ರುಬ್ಬಿ ಪೇಸ್ಟ್ ಮಾಡಿ.
* ಅದಕ್ಕೆ ಒಂದು ಕಪ್ ಬೆಲ್ಲದ ಪುಡಿ ಸೇರಿಸಿ (ಸಿಹಿ ನೋಡಿ ಬೇಕಿದ್ದರೆ ಇನ್ನು ಸ್ವಲ್ಪ ಸೇರಿಸಬಹುದು).
* ನಂತರ ತೆಂಗಿನ ತುರಿ, ಏಲಕ್ಕಿ, ಅಕ್ಕಿ ಹಿಟ್ಟು ಹಾಕಿ ಮಿಶ್ರ ಮಾಡಿ. ಮಿಶ್ರಣ ಸ್ವಲ್ಪ ಗಟ್ಟಿಯಿರಲಿ, ತುಂಬಾ ಗಟ್ಟಿ ಬೇಡ. ಬೇಕಿದ್ದರೆ ಹುರಿಗಡಲೆ ಸೇರಿಸಬೇಡಿ.
* ಈಗ ಬಾಳೆಲೆ ಬಿಸಿ ಮಾಡಿ.
* ನಂತರ ಬಾಳೆಲೆಯನ್ನು ಕತ್ತರಿಸಿ ಇಡಿ.
* ಅದಕ್ಕೆ ತುಪ್ಪ ಸವರಿ, ಅದರ ಮೇಲೆ ಹಿಟ್ಟು ಹಾಕಿ ಹರಿ, ಮಡಚಿ
* ಹೀಗೆ ಎಲ್ಲಾ ಮಾಡಿ ಹಬೆಯಲ್ಲಿ 30 ನಿಮಿಷ ಬೇಯಿಸಿ.
* ಇಷ್ಟು ಮಾಡಿದರೆ ರುಚಿ-ರುಚಿಯಾದ ಹಲಸಿನ ಹಿಟ್ಟು ಸವಿಯಲು ರೆಡಿ.
- * ತೆಂಗಿನ ತುರಿಯ ಬದಲಿಗೆ ತೆಂಗಿನ ಕಾಯಿಯ ಚಿಕ್ಕ-ಚಿಕ್ಕ ಹೋಳು ಹಾಕಬಹುದು. * ಇದಕ್ಕೆ ಬೆಲ್ಲದ ಬದಲಿಗೆ ಸಕ್ಕರೆ ಹಾಕಬಹುದು, ಆದರೆ ಬೆಲ್ಲದ ರುಚಿಯೂ ಸೂಪರ್, ಆರೋಗ್ಯಕರ ಕೂಡ * ಅಕ್ಕಿ ಇಟ್ಟು ನೆನೆಹಾಕಿ ಅದನ್ನು ತೊಳೆ ಜೊತೆ ಗಟ್ಟಿ ರುಬ್ಬಿ ಮಾಡಿದರೆ ಇನ್ನೂ ಸೂಪರ್ ಗಿರುತ್ತೆ.
- ಸರ್ವ್ - 100ಗ್ರಾಂ ಹಲಸಿನ ಹಣ್ಣು
- ಕೊಬ್ಬು - 1ಗ್ರಾಂ
- ಪ್ರೊಟೀನ್ - 2.8ಗ್ರಾಂ
- ಕಾರ್ಬ್ಸ್ - 38 ಗ್ರಾಂ
- ನಾರಿನಂಶ - 2.5 ಗ್ರಾಂ