HEALTH TIPS

ಸಂಬಂಧಗಳ ಕೊಂಡಿ ಕಳಚಿದಾಗ ಮನುಷ್ಯರನ್ನೇ ನಾಚಿಸುವಷ್ಟು ಕರಗಿದ ಪಲ್ಲತ್ ಬ್ರಹ್ಮದತ್ತ!: ವೈರಲ್ ಆದ ಹೀಗೊಂದು ಅಂತಿಮ ದರ್ಶನ

                  ಕೊಟ್ಟಾಯಂ: ಪಲ್ಲತ್ ಬ್ರಹ್ಮದತ್ತನನ್ನು ತನ್ನ ಸ್ವಂತ ಮಗನಂತೆ ಆರೈಕೆ ಮಾಡಿದ ಓಮನ ಚೇಟ್ಟನಿಗೆ ಅಂತಿಮ ನಮನ ಸಲ್ಲಿಸಲು ಬ್ರಹ್ಮದತ್ತನೇ ಮನೆಗೆ ಆಗಮಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ತನ್ನ ಸೊಂಡಿಲನ್ನು ಆಕಾಶದತ್ತ ತಿರುಗಿಸಿ ಕಣ್ಣೀರಿನೊಂದಿಗೆ ಗಜೇಂದ್ರ ತನ್ನ ಗುರುವಿನ ಮುಂದೆ ನಮಸ್ಕರಿಸಿರುವುದು ಭಾರೀ ಸದ್ದುಮಾಡಿದೆ. 

            ಮಾವುತ ಓಮನ ಚೇಟ್ಟನ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ದಾಮೋದರನ್ ನಾಯರ್ (74) ಅವರು ನಿನ್ನೆಕೊನೆಯುಸಿರೆಳೆದಿದ್ದರು.  ಕೊನೆಯದಾಗಿ ತನ್ನ ಗುರುವಿನ ಅಂತಿಮ ದರ್ಶನಗೈಯ್ಯಲು  ಬ್ರಹ್ಮದತ್ತನ್ ನನ್ನು ಕರೆತರಲಾಗಿತ್ತು. ಓಮನ ಚೇಟ್ಟನ್ ಅವರೊಂದಿಗೆ ಕಳೆದ ಕಾಲು ಶತಮಾನಗಳಿಂದ ಬ್ರಹ್ಮದತ್ತ ನೆರಳಾಗಿದ್ದನು. ಬ್ರಹ್ಮದತ್ತನೊಳಗಿದ್ದ ದುಃಖದ ಕಾರ್ಮೋಡ ಕಟ್ಟೆಯೊಡೆದು ನೆರೆದಿರುವ ಜನರಿಗೂ ತೀವ್ರ ಮರುಕಕ್ಕೆ ಕಾರಣವಾಯಿತು. 

          ಓಮನ ಚೇಟ್ಟನ್ ಮಾವುತನಾಗಿ ಆರು ದಶಕಗಳಾಗಿದೆ. ಈ ಪೈಕಿ, ಬ್ರಹ್ಮದತ್ತನೊಂದಿಗೆ ಅವರ ಒಡನಾಟ ಇಪ್ಪತ್ನಾಲ್ಕು ವರ್ಷಗಳಿಗಿಂvಲೂÀ ಹೆಚ್ಚು. ಈ ಹಿಂದೆ ಪುತ್ತುಪಲ್ಲಿ ಬ್ರಹ್ಮದತ್ತನ್ ಎಂದು ಕರೆಯಲಾಗುತ್ತಿದ್ದ ಈ ಆನೆಯನ್ನು ಈಗ ಪಾಲ ಭರನಂಗನಂ ಅಂಪಾರಾ ಪಲ್ಲತ್ ರಾಜೇಶ್ ಮನೋಜ್ ಎಂಬವರ ಒಡೆತನದಲ್ಲಿದೆ. ಅಲ್ಲಿಂದ ಬ್ರಹ್ಮದತ್ತ ಓಮನ ಚೇಟ್ಟನ್ ಮೃತರಾದ ಅವರ ಮನೆ ಕುರಪ್ಪದ ತಲುಪಿದನು.

               ಪಾಲಾ ಮೂಲದ ಪಲ್ಲತ್ ರಾಜೇಶ್ ಅವರೆನ್ನುವಂತೆ ಪಲ್ಲತ್ ಬ್ರಹ್ಮದತ್ತ  15 ನೇ ವಯಸ್ಸಿನಲ್ಲಿ ವಿವಿಧೆಡೆ ಕೆಲಸ ಮಾಡಲು ಪ್ರಾರಂಭಿಸಿದ್ದ. ಬಳಿಕ ಓಮನ ಚೇಟ್ಟನ್ ಕೈಯಲ್ಲಿ ಪಳಗಿದನು. ಅವರು ಎಂದಿಗೂ ಆನೆಯನ್ನು ನೋಯಿಸಿದವರಲ್ಲ. ಅವನನ್ನು ಮಗನಂತೆ ಜೊತೆಗೇ ಕರೆದೊಯ್ಯುವುದು, ಊಟ, ವಸತಿ, ನಿದ್ರೆ ಇವೆಲ್ಲ ದೈನಂದಿನ ಜೀವನವಾಗಿತ್ತು. 


                    ಮೂರು ದಿನಗಳ ಹಿಂದೆ ಓಮನ ಚೇಟ್ಟನ್ ಅವರಿಗೆ ಕಂಡುಬಂದ ಸಣ್ಣ ಕೆಮ್ಮಿನ ತರುವಾಯ ಕೊರೋನವನ್ನು ಪರೀಕ್ಷಿಸಿದರು. ಪರೀಕ್ಷೆಯಲ್ಲಿ ಯಾವುದೇ ಕೊರೋನಾ ಲಕ್ಷಣಗಳು ಕಂಡುಬಂದಿಲ್ಲ. ನಂತರದ ಪರೀಕ್ಷೆಯಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಂಡುಬಂದಿದೆ. ಇದರಿಂದ ಓಮನ ಚೇಟ್ಟನ್ ಅವರು ಬ್ರಹ್ಮದತ್ತ ನಿಂದ ಅಗಲಬೇಕಾಯಿತು. ಅವರು ಕೆಲವು ಕೀಮೋಥೆರಪಿ ಚಿಕಿತ್ಸೆಗಳಿಗೆ ಒಳಗಾದರು ಆದರೆ ನಂತರ ನಿಧನರಾದರು.

                ಅಂತಿಮವಾಗಿ ಓಮನ ಚೇಟ್ಟನ್ ಒಂದು ಬಾರಿಯಾದರೂ ಬ್ರಹ್ಮದತ್ತನನ್ನು ಭೇಟಿಯಾಗದಿರುವುದು ಬ್ರಹ್ಮದತ್ತನ ಕಣ್ಣಾಲಿಗಳ ದುಃಖ ಅವರೀರ್ವರ ಸಂಬಂಧದ ಸೂಚಕವಾಗಿದೆ. ಮತ್ತು ಬ್ರಹ್ಮದತ್ತ ತನ್ನ ಪ್ರೀತಿಯ ಮಾವುತನನ್ನು ಅಂತಿಮ ದರ್ಶನಗೈಯ್ಯಲು ಆಗಮಿಸಿದ್ದು 24 ಕಿ.ಮೀ ದೂರದಿಂದ ಎಂಬುದೂ ಗಮನಾರ್ಹ. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries