ತಿರುವನಂತಪುರ: ವರದಕ್ಷಿಣೆ ಕಿರುಕುಳ ಸಹಿತ ಕೌಟುಂಬಿಕ ಹಿಂಸಾಚಾರದ ದೂರುಗಳನ್ನು ವರದಿ ಮಾಡಲು ಅಪರಾಜಿತ ಈಸ್ ಆನ್‍ಲೈನ್ (https://keralapolice.gov.in/page/aparjitha-is-online ) ನ್ನು ರಾಜ್ಯದಲ್ಲಿ ಸ್ಥಾಪಿಸಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿರುವರು. ಕೌಟುಂಬಿಕ ಹಿಂಸಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಲು ಮಹಿಳೆಯರು ಇನ್ನು ಆನ್‍ಲೈನ್ ವ್ಯವಸ್ಥೆಯನ್ನು ಬಳಸಬಹುದು.
ದೂರುಗಳನ್ನು ಇಮೇಲ್ ಮೂಲಕ ವರದಿ ಮಾಡಬೇಕು. ದೂರುಗಳನ್ನು ವರದಿ ಮಾಡಲು 9497996992 ಮೊಬೈಲ್ ಸಂಖ್ಯೆ ಇಂದಿನಿಂದ (ಬುಧವಾರ) ಲಭ್ಯವಿರುತ್ತದೆ. ಇದಲ್ಲದೆ, ಪೋಲೀಸ್ ಪ್ರಧಾನ ಕಚೇರಿಯಲ್ಲಿ ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಣೆ ಇದ್ದು, ರಾಜ್ಯ ಪೋಲೀಸ್ ಮುಖ್ಯಸ್ಥರ ನಿಯಂತ್ರಣ ಕೊಠಡಿಯಲ್ಲಿ ದೂರು ನೀಡಬಹುದು. 9497900999 ಮತ್ತು 9497900286 ಗೆ ದೂರು ನೀಡಬೇಕು.
ಪತ್ತನಂತಿಟ್ಟು ಜಿಲ್ಲಾ ಪೋಲೀಸ್ ಮುಖ್ಯಸ್ಥ ಆರ್.ಕೆ. ನಿಶಾಂತಿನಿ ಅವರನ್ನು ರಾಜ್ಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿದೆ. ದೂರುದಾರರು 9497999955 ಗೆ ಕರೆ ಮಾಡಬಹುದು.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾತನಾಡಿ, ರಾಜ್ಯದಲ್ಲಿ ವರದಕ್ಷಿಣೆ ಸಂಬಂಧಿ ಚಿತ್ರಹಿಂಸೆ, ಸಾವುಗಳು ಕ್ಷುಲ್ಲಕವಲ್ಲ. ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ. ವರದಕ್ಷಿಣೆ ಹೆಸರಿನಲ್ಲಿ ಮಾನಹಾನಿ ಮತ್ತು ಕಿರುಕುಳ ಇತರ ರಾಜ್ಯಗಳಲ್ಲಿ ಸಾಕಷ್ಟು ಕೇಳಿಬರುತ್ತದೆ. ಈ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಸಂಭವಿಸುವುದು ಸಾಂಸ್ಕøತಿಕ ಶ್ರೀಮಂತಿಕೆಗೆ ಅನುಕೂಲಕರವಲ್ಲ. ಘಟನೆಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದರು.