HEALTH TIPS

ಮಕ್ಕಳ ಮೇಲೆ ಸೀರಮ್​ ಇನ್ಸ್​ಟಿಟ್ಯೂಟ್​ನ ಕರೊನಾ ಲಸಿಕೆಯ ಪ್ರಯೋಗ

          ನವದೆಹಲಿ : ಮಕ್ಕಳಿಗೆ ಕರೊನಾ ಲಸಿಕೆಯನ್ನು ಒದಗಿಸುವ ಪ್ರಯತ್ನಕ್ಕೆ ಇದೀಗ ಮತ್ತಷ್ಟು ಪುಷ್ಟಿ ಸಿಕ್ಕಿದೆ. ಕೋವಿಶೀಲ್ಡ್​ ಕರೊನಾ ಲಸಿಕೆ ತಯಾರಕ ಸೀರಮ್​ ಇನ್ಸ್​ಟಿಟ್ಯೂಟ್​ ಆಫ್ ಇಂಡಿಯ ತನ್ನ ಹೊಸ ಲಸಿಕೆ 'ನೋವಾವ್ಯಾಕ್ಸ್​'ನ ಕುರಿತಾಗಿ ಮಕ್ಕಳ ಮೇಲೆ ಕ್ಲಿನಿಕಲ್ ಟ್ರಯಲ್ಸ್​ಅನ್ನು ಜುಲೈನಲ್ಲಿ ಆರಂಭಿಸಲಿದೆ ಎಂದು ತಿಳಿದುಬಂದಿದೆ.

          ಮಕ್ಕಳಿಗೆ 'ಕೋವಾಕ್ಸಿನ್​' ಲಸಿಕೆಯ ಸೂಕ್ತತೆ ಮತ್ತು ಅದರ ಪರಿಣಾಮಕಾರಿತ್ವವನ್ನು ಪತ್ತೆ ಹಚ್ಚಲು ಈಗಾಗಲೇ ಭಾರತ್​ ಬಯೋಟೆಕ್​​ ದೆಹಲಿ ಮತ್ತು ಪಟ್ನ ಏಮ್ಸ್​ ಆಸ್ಪತ್ರೆಗಳಲ್ಲಿ ಕ್ಲಿನಿಕಲ್​ ಟ್ರಯಲ್​ಗಳನ್ನು ಆರಂಭಿಸಿದೆ. ಇದರೊಂದಿಗೆ ಬಯೋಟೆಕ್​ನ ನೇಸಲ್​ ವಾಕ್ಸಿನ್​ ಪ್ರಯೋಗಗಳಲ್ಲಿ ಕೂಡ ಮಕ್ಕಳನ್ನು ಸೇರಿಸಿಕೊಳ್ಳಲಾಗಿದೆ. ಮತ್ತೊಂದು ಫಾರ್ಮ ಕಂಪೆನಿ ಜೈಡಸ್​ ಕಾಡಿಲಾ ಕೂಡ ತನ್ನ 'ಜೈಕೋವಿ-ಡಿ' ಲಸಿಕೆಯನ್ನು ಮಕ್ಕಳಿಗೆ ಬಳಸುವ ನಿಟ್ಟಿನಲ್ಲಿ ಪ್ರಯೋಗ ಮಾಡುತ್ತಿದೆ. ಹೀಗಾಗಿ ಮಕ್ಕಳ ಬಳಕೆಗೆ ನೋವಾವಾಕ್ಸ್​ ಸೇರಿ ನಾಲ್ಕು ಲಸಿಕೆಗಳ ಪ್ರಯೋಗ ನಡೆಯಲಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries