ಮಂಜೇಶ್ವರ: ಅಡಿಕೆ ಮತ್ತು ಕೊಕ್ಕೋ ಬೆಳೆಗಾರರ ಸಂಕಷ್ಟದಲ್ಲಿ ರೈತರ ಬೆನ್ನೆಲುಬಾಗಿ ನಿಂತ ಕ್ಯಾಂಪ್ಕೋ ಕೋವಿಡ್ ಸಂಕಷ್ಟ ಕಾಲದಲ್ಲಿ ಕೂಡ ರೈತರಿಗೆ ನೆರವಾಗಿ ಯೋಗ್ಯ ಬೆಲೆಯನ್ನು ನೀಡಿ ಅಡಿಕೆ ಖರೀದಿಸುವುದರಲ್ಲಿ ಯಶಸ್ವಿ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಶಂಕರ ನಾರಾಯಣ ಭಟ್ ಖಂಡಿಗೆ ಅವರು ತಿಳಿಸಿದರು.
ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಸಹಯೋಗದೊಂದಿಗೆ ಪಾವೂರು, ವರ್ಕಾಡಿ ಯಲ್ಲಿ ಕಾರ್ಯಾರಂಭಿಸಿದ ನೂತನ ಅಡಿಕೆ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ಸಂಸ್ಥೆಯ ಸಕ್ರಿಯ ಸದಸ್ಯರಿಗೆ ತೆರೆದ ಹೃದಯ ಶಸ್ತ್ರಕ್ರಿಯೆ, ಎಂಜಿಯೋಪ್ಲಾಸ್ಟಿ, ಡಯಾಲಿಸಿಸ್ ಮುಂತಾದ ಗಂಭೀರ ಖಾಯಿಲೆಗಳಿಗೆ ಹಣಕಾಸಿನ ನೆರವು ಹಾಗು ಆಕಸ್ಮಿಕ ಮರಣ ಪರಿಹಾರಗಳನ್ನು ಘೋಷಿಸಿರುವುದರಿಂದ ಸಂಘದ ಸಕ್ರಿಯ ಸದಸ್ಯರಾಗುವ ಮೂಲಕ ಆಪತ್ಕಾಲದಲ್ಲಿ ಕ್ಯಾಂಪೆÇ್ಕದ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಎಂದು ಅವರು ಈ ಸಂದರ್ಭದಲ್ಲಿ ಕರೆ ನೀಡಿದರು.
ವರ್ಕಾಡಿ ಸೇವಾ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ದಿವಾಕರ ಎಸ್.ಜೆ. ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಕಾಡಿ ಚರ್ಚ್ ನ ಧರ್ಮ ಗುರು ಫ್ರಾನ್ಸಿಸ್ ರೋಡ್ರಿಗೆಸ್, ಜಿಲ್ಲಾ ಪಂಚಾಯತಿ ಸದಸ್ಯೆ ಕಮಲಾಕ್ಷಿ, ಕ್ಯಾಂಪೆÇ್ಕ ನಿರ್ದೇಶಕರುಗಳಾದ ಜಯಪ್ರಕಾಶ್ ನಾರಾಯಣ ತೊಟ್ಟೆತೋಡಿ, ಬಾಲಕೃಷ್ಣ ರೈ ಬಾನೊಟ್ಟು , ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ವರ್ಕಾಡಿ ಗ್ರಾಮ ಪಂಚಾಯತಿ ಸದಸ್ಯೆ ಗೀತಾ ಭಾಸ್ಕರ್, ಮಿಂಜ ಗ್ರಾಮ ಪಂಚಾಯತಿ ಸದಸ್ಯ ನಾರಾಯಣ ತುಂಗಾ, ಬಾಬು, ಬದಿಯಡ್ಕ ವಲಯದ ಕ್ಯಾಂಪೆÇ್ಕ ಪ್ರಬಂಧಕ ಗಿರೀಶ್, ಹಿರಿಯ ಕೃಷಿಕರಾದ ನಾರಾಯಣ ನಾವಡ ಚೆಂಡೆಲ್ ವರ್ಕಾಡಿ ಮುಂತಾದವರು ಶುಭಾಶಂಸನೆಗೈದರು.
ಬ್ಯಾಂಕ್ ನ ಉಪಾಧ್ಯಕ್ಷ ಅಬ್ದುಲ್ಲಾ, ನಿರ್ದೇಶಕರುಗಳಾದ ಮೊಹಮ್ಮದ್ ಇಕ್ಬಾಲ್, ಬೀಫಾತಿಮ, ಸೀತಾರಾಮ ಪೂಜಾರಿ, ಜಯಾ , ಬ್ಯಾಂಕಿನ ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್, ಗೋಪಾಲ ಶೆಟ್ಟಿ ಅರಿಬೈಲ್, ಕಿಶೋರ್ ಕುಮಾರ್ ನಾಯ್ಕ್, ಮೊಹಮ್ಮದ್ ಪಿ.ಎಮ್., ರಹಿಮಾನ್ ಸಾಹೀಬ್, ಅಜಿತ್ ಪ್ರಸಾದ್ ನಾಯ್ಕ್, ಶ್ರೀಪತಿ ರಾವ್, ಟಿ ನಾರಾಯಣ ಭಟ್ ಮುಂತಾದವರು ಉಪಸ್ಥಿತರಿದ್ದರು. ಬ್ಯಾಂಕ್ ನ ಕಾರ್ಯದರ್ಶಿ ಶ್ರೀವತ್ಸ ಭಟ್ ಸ್ವಾಗತಿಸಿ, ಬ್ಯಾಂಕ್ ನ ನಿರ್ದೇಶಕ ಸೀತಾರಾಮ ಬೇರಿಂಜ ವಂದಿಸಿದರು.