ಕೊಚ್ಚಿ: ಕೊಡಕರ ದರೋಡೆ ಪ್ರಕರಣವನ್ನು ಉದ್ದೇಶಪೂರ್ವಕವಾಗಿ ದೂಷಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹೇಳಿದೆ.
ಆರ್‌ಎಸ್‌ಎಸ್ ನ್ನು ಉದ್ದೇಶಪೂರ್ವಕವಾಗಿ ಸಿಲುಕಿಸಿ ಸುದ್ದಿಗಳನ್ನು ಹೆಣೆದು ಪ್ರಕರಣದ ಆರಂಭದಿಂದಲೂ ಪ್ರಯತ್ನಗಳು ನಡೆದಿವೆ ಮತ್ತು ಪ್ರಕರಣದ ತನಿಖೆ ಸೋಗಿನಲ್ಲಿ ಆರ್‌ಎಸ್‌ಎಸ್‌ನ ಚಿತ್ರಣಕ್ಕೆ ಕಳಂಕ ತರುವ ಪ್ರಯತ್ನ ನಡೆಯುತ್ತಿದ್ದು, ಪೊಲೀಸರು ಇಂತಹ ಕಾರಸ್ಥಾನಕ್ಕೆ ಕ್ಯೆಜೋಡಿಸಬಾರದು ಎಂದು ಆರ್‌ಎಸ್‌ಎಸ್ ಪ್ರಾದೇಶಿಕ ಕಾರ್ಯದರ್ಶಿ ಹೇಳಿದ್ದಾರೆ.
ಕೊಡಕರ ದರೋಡೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತಂಡವು ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಕಳಂಕಗೊಳಿಸುವ ಸಿಪಿಎಂ ರಾಜಕೀಯ ಕಾರ್ಯಸೂಚಿಯನ್ನು ಅನುಸರಿಸುತ್ತಿದೆ. ದರೋಡೆಯ ಹಿಂದಿನ ನೈಜ ಸಂಗತಿಗಳನ್ನು ಹೊರತರುವ ಬದಲು, ಆರ್‌ಎಸ್‌ಎಸ್ ನೊಂದಿಗೆ ಘಟನೆಗೆ ಯಾವುದೇ ಸಂಬಂಧವಿಲ್ಲದವರನ್ನು ಥಳುಕುಹಾಕಿ ದೂಷಿಸಲು ಪ್ರಯತ್ನಿಸುತ್ತಿದೆ ಎಂದು ಸಂಘ ಹೇಳಿದೆ. ಆರ್‌ಎಸ್‌ಎಸ್ ನ್ನು ವೃತಾ ಒಳಗೊಳಿಸಿ ಸುದ್ದಿಗಳನ್ನು ತಯಾರಿಸಲು ಪ್ರಕರಣದ ಆರಂಭದಿಂದಲೂ ಪ್ರಯತ್ನಗಳು ನಡೆಯುತ್ತಿವೆ. ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಎಸ್‌ಎಸ್ ಸಂಪರ್ಕ ಮತ್ತು ಆರ್‌ಎಸ್‌ಎಸ್ ನಾಯಕರನ್ನು ಪ್ರಶ್ನಿಸುವ ಕ್ರಮಗಳ ಬಗ್ಗೆ ಮಾಧ್ಯಮಗಳ ಒಂದು ಭಾಗವು ಉದ್ದೇಶಪೂರ್ವಕವಾಗಿ ವದಂತಿಗಳನ್ನು ಹರಡುತ್ತಿದೆ ಎಂದು ಆರ್‌ಎಸ್‌ಎಸ್ ಪ್ರಾದೇಶಿಕ ಕಾರ್ಯನಿರ್ವಾಹಕ ಅಧಿಕಾರಿ ಹೇಳಿದ್ದಾರೆ. ತನಿಖೆಯನ್ನು ದಿಕ್ಕುತಪ್ಪಿಸಲು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಅಪಖ್ಯಾತಿಗೊಳಿಸುವ ಒಗ್ಗಟ್ಟಿನ ಪ್ರಯತ್ನಗಳನ್ನು ಆರ್‌ಎಸ್‌ಎಸ್ ತೀವ್ರವಾಗಿ ಖಂಡಿಸಿದೆ.
ಕೊಡಕರ ಘಟನೆಗೆ ಆರ್‌ಎಸ್‌ಎಸ್‌ಗೂ ಯಾವುದೇ ಸಂಬಂಧವಿಲ್ಲ. ಸಿಪಿಎಂ ಯಾವಾಗಲೂ ಶಸ್ತ್ರಾಸ್ತ್ರ ಬಲದಿಂದ ರಾಷ್ಟ್ರೀಯ ಪಡೆಗಳನ್ನು ದುರ್ಬಲಗೊಳಿಸಲು ಮತ್ತು ನಾಶಮಾಡಲು ಪ್ರಯತ್ನಿಸುತ್ತಿದೆ. ಪೊಲೀಸರನ್ನು ಸಿಪಿಎಂನ ರಾಜಕೀಯ ಅಸ್ತ್ರವಾಗಿ ಪರಿವರ್ತಿಸಲಾಗಿದೆ ಎಂದು ಆರ್‌ಎಸ್‌ಎಸ್ ಹೇಳಿಕೆಯಲ್ಲಿ ತಿಳಿಸಿದೆ. ಆರ್‌ಎಸ್‌ಎಸ್‌ನ ಚಿತ್ರಣಕ್ಕೆ ಕಳಂಕ ತರುವ ಪ್ರಯತ್ನವನ್ನು ಪೊಲೀಸರು ನಿಲ್ಲಿಸಬೇಕು. ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಈ ಘಟನೆಯ ಬಗ್ಗೆ ಪ್ರಾಮಾಣಿಕ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ ಮತ್ತು ಮಾಧ್ಯಮಗಳ ಒಂದು ಭಾಗವು ಆರ್‌ಎಸ್‌ಎಸ್ ವಿರುದ್ಧ ಸುಳ್ಳು ಸುದ್ದಿ ಹರಡುವುದನ್ನು ನಿಲ್ಲಿಸಬೇಕೆಂದು ಸಂಘ ತಿಳಿಸಿದೆ.