HEALTH TIPS

ಕಾಸರಗೋಡಿನಲ್ಲಿ ಮಲಯಾಳೀಕರಣಗೊಳ್ಳುತ್ತಿರುವ ಸ್ಥಳನಾಮ-ಮಧ್ಯ ಪ್ರವೇಶಿಸಿದ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

                                      

             ಕಾಸರಗೋಡು: ಜಿಲ್ಲೆಯ ನಾನಾ ಪ್ರದೇಶಗಳ ಹೆಸರು ಮಲಯಾಳೀಕರಣಗೊಳ್ಳುತ್ತಿದ್ದು, ಈ ಬಗ್ಗೆ ಜಿಲ್ಲೆಯ ಕನ್ನಡಪರ ಸಂಘಟನೆಗಳ ಪ್ರತಿಭಟನೆ, ವಿರೋಧವನ್ನು ಲೆಕ್ಕಿಸದ ಕೇರಳ ಸರ್ಕಾರದ ನಡೆ ವಿರುದ್ಧ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಸಮಧಾನ ವ್ಯಕ್ತಪಡಿಸಿದೆ. ಈ ಅವ್ಯವಸ್ಥೆ ಸರಿಪಡಿಸುವ ನಿಟ್ಟನಲ್ಲಿ ಪ್ರಾಧಿಕಾರ ಮಧ್ಯ ಪ್ರವೇಶಿಸಲು ಮುಂದಾಗಿದೆ.

       ಕೇರಳ-ಕರ್ನಾಟಕ ಗಡಿ ಪ್ರದೇಶದ ಬಹುತೇಕ ಸ್ಥಳನಾಮ ಇಂದು ಮಲಯಾಳೀಕರಣಗೊಳ್ಳುತ್ತಿರುವುದರಿಂದ ಕೆಲವು ಜಾಗದ ಹೆಸರು ಸಂಪೂರ್ಣ ವಿರೂಪಗೊಳ್ಳಲು ಕಾರಣವಾಗುತ್ತಿದೆ. ಈ ಬಗ್ಗೆ ಅಧ್ಯಯನ ನಡೆಸಿರುವ ಪ್ರಾಧಿಕಾರ, ಕಾಸರಗೋಡು-ಮಂಜೇಶ್ವರದ ಕನ್ನಡ ಸಂಸ್ಕøತಿ, ಪರಂಪರೆಯನ್ನು ಸೂಚಿಸುವ ಕೆಲವೊಂದು ಹಳ್ಳಿಗಳ ಹೆಸರನ್ನು ಕೇರಳ ಸರ್ಕಾರದ ಸ್ಥಳೀಯ ಸಂಸ್ಥೆಗಳು ಬದಲಾಯಿಸುತ್ತಿದ್ದು, ಈ ಕ್ರಮ ಕೈಬಿಡುವಂತೆ ಕೇರಳ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಇಲ್ಲಿನ ಜಾಗದ ಹೆಸರನ್ನು ಮಲಯಾಳೀಕರಣಗೊಳಿಸುತ್ತಿರುವುದರಿಂದ ಪನ್ನಡಿಗರ ಪರಂಪರಾಗತ ಭಾವನೆಗಳಿಗೆ ಧಕ್ಕೆಯುಂಟಾಗುತ್ತಿದೆ. ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಮಧೂರು ಹೆಸರನ್ನು 'ಮಧೂರಂ', ಮಲ್ಲ ಎಂಬ ಹೆಸರನ್ನು 'ಮಲ್ಲಂ', ಪಿಲಿಕುಂಜೆಯನ್ನು 'ಪಿಲಿಕುನ್ನು', ಆನೆಬಾಗಿಲನ್ನು 'ಆನವಾದುಕ್ಕಲ್', ಹೊಸದುರ್ಗವನ್ನು 'ಪುದಿಯಕೋಟ', ಸಸಿಹಿತ್ಲು ಪ್ರದೇಶವನ್ನು 'ತೈವಳಪ್ಪು'  ಈ ರೀತಿಯಾಗಿ ತಪ್ಪಾಗಿ ಬರೆಯಲಾಗುತ್ತಿದ್ದು, ಇದನ್ನು ಲೋಕೋಪಯೋಗಿ ಹಾಗೂ ಕಂದಾಯ ಇಲಾಖೆ ನಾಮಫಲಕಗಳಲ್ಲೂ ನಮೂದಿಸಲಾಗುತ್ತಿದೆ. ಈ ಹಿಂದೆ ಕನ್ನಡದಲ್ಲಿದ್ದ ನಾಮಫಲಕಗಳನ್ನು ಮಲಯಾಳೀಕರಣಗೊಳಿಸಿ ಅಳವಡಿಸುವ ಪ್ರಕ್ರಿಯೆಯೂ ಜಾರಿಯಲ್ಲಿದೆ.ಈ ಬಗ್ಗೆ ಜಿಲ್ಲೆಯ ಕನ್ನಡಪರ ಸಂಘಟನೆಗಳು ತಮ್ಮ ಅಸಮಧಾನ ವ್ಯಕ್ತಪಡಿಸಿದ್ದು, ಈ ವಿಷಯವನ್ನೂ ಕೇರಳ ಸರ್ಕಾರದ ಗಮನಕ್ಕೂ ತಂದಿದ್ದರು.

             ಕಾಸರಗೋಡು ಜಿಲ್ಲೆಯ ಮಂಜೇಶ್ವರ ಸೇರಿದಂತೆ ವಿವಿಧೆಡೆ ಹಲವು ದಶಕಗಳಿಂದ ಜಾರಿಯಲ್ಲಿರುವ  ಕನ್ನಡದ ಸ್ಥಳನಾಮವನ್ನು ಬದಲಾಯಿಸಿ ನಾಮಫಲಕ ಅಳವಡಿಸುವ ಪ್ರಕ್ರಿಯೆ ಕೈಬಿಡುವಂತೆ ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ  ಪತ್ರ ಬರೆಯುವಂತೆ  ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಹಾಗೂ ಕಾರ್ಯದರ್ಶಿ ಪ್ರಕಾಶ್ ಮತ್ತೀನಹಳ್ಳಿ ಅವರು ಕರ್ನಾಟಕದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಅವರಿಗೆ ಶುಕ್ರವಾರ ಮನವಿ ಮೂಲಕ ಒತ್ತಾಯಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries