ಕಣ್ಣೂರು: ತಂಬಾಕು ವಿರೋಧಿ ದಿನದಂದು ನಿರ್ಣಾಯಕ ಪ್ರತಿಜ್ಞೆಯೊಂದನ್ನು ಮಾಡುವ ಮೂಲಕ ವಿದ್ಯಾರ್ಥಿಗಳ ತಂಡವೊಂದು ಗಮನ ಸೆಳೆದಿದೆ. ತಂಬಾಕು ಉತ್ಪನ್ನಗಳನ್ನು ಬಳಸುವ ಪುರುಷರನ್ನು ವಿವಾಹವಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಪ್ರತಿಜ್ಞೆ ಮಾಡಿರುವರು. ತಂಬಾಕು ವಿರೋಧಿ ದಿನದ ಅಂಗವಾಗಿ ನಡೆದ ಸಮಾರಂಭದಲ್ಲಿ ಕಣ್ಣೂರು, ಕಾಸರಗೋಡು, ಕೋಝಿಕ್ಕೋಡ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿಗಳು ಮತ್ತು ಮಾಹೆ ಪ್ರದೇಶದ ವಿದ್ಯಾರ್ಥಿಗಳು ಭಾಗವಹಿಸಿದ್ದರು. 220 ವಿದ್ಯಾರ್ಥಿಗಳು ಒಟ್ಟಾಗಿ ಪ್ರಮಾಣ ವಚನ ಸ್ವೀಕರಿಸಿದರು. ತಂಬಾಕು ಉತ್ಪನ್ನಗಳನ್ನು ಬಳಸಲಾಗುವುದಿಲ್ಲ ಮತ್ತು ತಂಬಾಕಿಗೆ ವ್ಯಸನಿಯಾದವರನ್ನು ಜೀವನ ಪಾಲುದಾರರಾಗಿ ಸ್ವೀಕರಿಸಲಾಗುವುದಿಲ್ಲ ಎಂಬ ಪ್ರತಿಜ್ಞೆ ಸ್ವೀಕರಿಸಿದರು.
ಮಲಬಾರ್ ಕ್ಯಾನ್ಸರ್ ಸೊಸೈಟಿಯ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಆನ್‍ಲೈನ್‍ನಲ್ಲಿ ಆಯೋಜಿಸಲಾಗಿತ್ತು. ಸಮುದಾಯ ಆಂಕೊಲಾಜಿ ವಿಭಾಗದ ಮಾಜಿ ಆರ್‍ಸಿಸಿ ಮುಖ್ಯಸ್ಥ ಡಾ.ಬಾಬು ಮ್ಯಾಥ್ಯೂ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು.