ಮಧೂರು: ಪಟ್ಲ ಹಸುರು ಘೋಷಣೆ ಶನಿವಾರ ಜರುಗಿತು. ಮಧೂರು ಬಳಿಯ ಪಟ್ಲದ ಸರಕಾರಿ ಶಾಲೆ ಮತ್ತು ಪಟ್ಲ ಭಂಡಾರ ಮನೆ ಆವರಣದಲ್ಲಿ ಈ ಸಮಾರಂಭ ಜರುಗಿತು.
ಪ್ರಾಥಮಿಕ ಪೂರ್ವ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ಅವರ ಹೆತ್ತವರು, ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಸೇರಿ ಸಾವಿರಾರು ಮರವಾಗಿ ಬೆಳೆಯಬಲ್ಲ ಸಸಿಗಳನ್ನು ಪಟ್ಲ ಪ್ರದೇಶದಲ್ಲಿ ನೆಟ್ಟಿದ್ದಾರೆ.
ಗ್ರೀನ್-ಕ್ಲೀನ್ ಕೇರಳ ಯೋಜನೆಯೊಂದಿಗೆ ಸಹಕರಿಸಿ ಆಯಿಸ್ಕ್ ಇಂಟರ್ ನ್ಯಾಷನಲ್, ಫಾರೆಸ್ಟ್ ಕ್ಲಬ್, ಸ್ಕೌಟ್ ಮತ್ತು ಗೈಡ್ಸ್, ಮಾತೃಭೂಮಿ ಸೀಡ್ಸ್ ಜಂಟಿ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಈ ಘೋಷಣೆ ನಡೆದಿದೆ. ಜಿಲ್ಲಾ ಶಿಕ್ಷಣಾಧಿಕಾರಿ ಎನ್.ನಂದಿಕೇಶ ಘೋಷಣೆ ನಡೆಸಿದರು. ಅರಣ್ಯ ಸಹಾಯಕ ಕನ್ಸರ್ ವೇಟರ್ ಅಜಿತ್ ಕೆ.ರಾಮನ್ ಕಾರ್ಯಕ್ರಮ ಉದ್ಘಾಟಿಸಿದರು. ಸ್ಪೆಷ್ಯಲ್ ಬ್ರಾಂಚ್ ಡಿ.ವೈ.ಎಸ್.ಪಿ. ಎ.ವಿ.ಪ್ರದೀಪ್ ಮುಖ್ಯ ಅತಿಥಿಯಾಗಿದ್ದರು. ಶಾಲೆಯ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಎಚ್.ಕೆ.ಅಬ್ದುಲ್ ರಹಮಾನ್, ಪಂಚಾಯತ್ ಸದಸ್ಯೆ ಝಮೀರಾ ಮಜೀದ್, ಶಾಲೆಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಸಯ್ಯದ್ , ಸಿ.ಎಚ್.ಅಬೂಬಕ್ಕರ್, ಅಸ್ಲಂ, ಪಟ್ಲ ಕ್ಷೇತ್ರ ಪದಾಧಿಕಾರಿಗಳಾದ ಸುಕುಮಾರ ಕುದ್ರೆಪ್ಪಾಡಿ, ನಾರಾಯಣ ಕಾರ್ನವರ್, ಎನ್.ಅಶ್ವಿನಿ ಸುನಿಲ್, ಶಿಕ್ಷಕರಾದ ಪ್ರೇಮಚಂದ್ರನ್ ಕೆ., ಪ್ರವಿತ್ರನ್ ಎ. ಅನಿತಾ ಎಂ.ಪಿ., ಪ್ರೀತಾ ಕೆ., ಗೈಡ್ ಫಾತಿಮತ್ ಲಿಯಾನಾ, ಸ್ಕೌಟ್ ಇನ್ಸಾಫ್ ಆಲಿ ಮೊದಲಾದವರು ಸಸಿ ನೆಟ್ಟರು.
ಮುಖ್ಯ ಶಿಕ್ಷಕ ಪಿ.ಆರ್.ಪ್ರದೀಪ್ ಸ್ವಾಗತಿಸಿದರು. ಸಂಚಾಲಕಿ ಪಿ.ಟಿ.ಉಷಾ ವಂದಿಸಿದರು.