ತಿರುವನಂತಪುರ: ಮದ್ಯದ ಬೆಲೆ ಏರಿಕೆಗೆ ವಿರುದ್ಧ ಹೋರಾಡಲು ಮತ್ತು ಮದ್ಯವ್ಯಸನಿಗಳ ಹಕ್ಕುಗಳ ರಕ್ಷಣೆಯ ಉದ್ದೇಶದಿಂದ ಮದ್ಯ ಗ್ರಾಹಕರ ದೊಡ್ಡ ಗುಂಪನ್ನು ರೂಪಿಸಲಾಗಿದೆ.
ಈ ಸಂಘಟನೆಯನ್ನು "ಆಲ್ಕೊಹಾಲ್ ಡ್ರಿಂಕರ್ಸ್ ಆರ್ಗನೈಸೇಶನ್ ಫಾರ್ ಪೆÇ್ರಟೆಸ್ಟ್ ಫಾರ್ ಹೈ ಟ್ಯಾಕ್ಸ್" (ಎಡಿಒಪಿಟಿ) ಅಥವಾ " ಮದ್ಯ ವ್ಯಸನಿಗಳ ಹಕ್ಕುಗಳು ಮತ್ತು ಘನತೆಯ ರಕ್ಷಣೆಗಾಗಿ ಮಾನವೀಯ ಹೋರಾಟ" ಎಂದು ಕರೆಯಲಾಗುತ್ತದೆ. ಎರ್ನಾಕುಳಂನಲ್ಲಿ ಸಂಸ್ಥೆಯ ಕಚೇರಿ ಆರಂಭಿಸುವ ಕೆಲಸ ಹಾಗೂ ನೋಂದಣಿಗೆ ಸಂಬಂಧಿಸಿದ ಕಾರ್ಯಗಳು ಪ್ರಗತಿಯಲ್ಲಿವೆ. ಇದರ ಆನ್‍ಲೈನ್ ಚರ್ಚೆಗಳು ಶುಕ್ರವಾರ ಮತ್ತು ಶನಿವಾರ (ಇಂದು) ನಡೆಯುತ್ತಿವೆ.
ಎಡಿಒಪಿಟಿ ವಾಟ್ಸಾಪ್ ಸಮುದಾಯವು ಪ್ರಸ್ತುತ ಕೇರಳದ ಎಲ್ಲಾ 14 ಜಿಲ್ಲೆಗಳಲ್ಲಿ ಸಕ್ರಿಯವಾಗಿದೆ. ಒಟ್ಟು 1200 ಸದಸ್ಯರಲ್ಲಿ 200 ಜನರು ಯಾವಾಗಲೂ ಸಕ್ರಿಯರಾಗಿದ್ದಾರೆ. ಇದಲ್ಲದೆ, ಎಡಿಒಪಿಟಿ ಫೇಸ್‍ಬುಕ್ ಸಮುದಾಯವು 10,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಸುಸಂಘಟಿತ ಸಂಘಟನೆಯ ಮುಖ್ಯಸ್ಥರು ವಿದ್ಯಾವಂತ ಯುವಕರ ಗುಂಪು ಎನ್ನುವುದೂ ವಿಶೇಷ.
ಪ್ರಸ್ತುತದ ತಾತ್ಕಾಲಿಕ ಆಡಳಿತ ಮಂಡಳಿ ಈಗ ಸಾಂಸ್ಥಿಕ ವಿಷಯಗಳನ್ನು ಸಂಘಟಿಸುತ್ತಿದೆ. ಸಂಸ್ಥೆಯ ನೋಂದಣಿಯ ನಂತರ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬರಲಿದೆ. ಪ್ರಸ್ತುತ ಪದಾಧಿಕಾರಿಗಳು
ಬಿಜು ಮ್ಯಾಥ್ಯೂ (ಅಧ್ಯಕ್ಷ)- ಮುಂಡಕ್ಕಾಯಂ, ಕೊಟ್ಟಾಯಂ ಜಿಲ್ಲೆ (ವಾಟ್ಸಾಪ್ 00966567289507), ಸುಭಾಷ್ (ಉಪಾಧ್ಯಕ್ಷ), ಚೆಂಗಮಾನಡು, ಎರ್ನಾಕುಲಂ ಜಿಲ್ಲೆ (00918547520869), ರತೀಶ್(ಕಾರ್ಯದರ್ಶಿ) ಕೊಟ್ಟಾರಕ್ಕರÀ, ಕೊಲ್ಲಂ ಜಿಲ್ಲೆ (00916238170905), ಮತ್ತು ಶಿನು ಥಾಮಸ್(ಖಜಾಂಜಿ) ಪತ್ತನಂತಿಟ್ಟು ಜಿಲ್ಲ್ಲೆ.
ಎಡಿಒಪಿಟಿಯ ಮಧ್ಯಂತರ ಆಡಳಿತ ಮಂಡಳಿ ಈವರೆಗೆ ಮೂರು ಜ್ಞಾಪಕ ಪತ್ರಗಳನ್ನು ಅಬಕಾರಿ ಸಚಿವ, ಬೆವ್ಕೊ ಎಂಡಿ ಮತ್ತು ಮುಖ್ಯ ಕಾರ್ಯದರ್ಶಿಗೆ ನೇರವಾಗಿ ಮತ್ತು ಅಂಚೆ ಮೂಲಕ ಸಲ್ಲಿಸಿದೆ. ಇದು ಮದ್ಯದ ಬೆಲೆಯಲ್ಲಿ ಅಭೂತಪೂರ್ವ ಹೆಚ್ಚಳ, ಕಡಿಮೆ-ಗುಣಮಟ್ಟದ ಮದ್ಯ ಮಾರಾಟವನ್ನು ಕೊನೆಗೊಳಿಸಬೇಕು ಮತ್ತು ಬಿವರೇಜ್ ಔಟ್‍ಲೆಟ್ ಕಾರ್ಮಿಕರ ಗೂಂಡಾಗಿರಿಯನ್ನು ಕೊನೆಗೊಳಿಸುವುದು ಮತ್ತು ಜವಾನ್‍ನಂತಹ ಹೆಚ್ಚಿನ ಸರ್ಕಾರಿ ಸ್ವಾಮ್ಯದ ಉತ್ತಮ ಮದ್ಯವನ್ನು ಲಭ್ಯವಾಗುವಂತೆ ಮಾಡುವಂತೆ ಕರೆ ಒತ್ತಾಯಿಸಿದೆ.