ತಿರುವನಂತಪುರ: ಹಳೆಯ ನಾಣ್ಯಗಳು ಮತ್ತು ನೋಟುಗಳನ್ನು ಸ|ಂಗ್ರಹಿಸಿ ನಮಗೆ ಕಳಿಸಿ, ಹಂಚಿ ಈ ಮೊದಲಾದ ಸೂಚನೆಗಳ ಜೊತೆಗೆ ಲಕ್ಷ ಮೌಲ್ಯ ಗಳಿಸಬಹುದು ಎಂದು ಆನ್‍ಲೈನ್‍ನಲ್ಲಿ ಸಾಕಷ್ಟು ಸುದ್ದಿಗಳು ಬರುತ್ತಿವೆ. ಪ್ರಸ್ತುತ ಚಲಾವಣೆಯಲ್ಲಿ ಇರುವ ಮತ್ತು ಚಲಾವಣೆಯಲ್ಲಿ ಇಲ್ಲದ ನಾಣ್ಯ, ನೋಟುಗಳಿಗೆ ಸ್ಪರ್ಧಾತ್ಮಕ ಬೆಲೆ ನೀಡಲಾಗುತ್ತದೆ ಎಂದೇ ಪ್ರಚುರಪಡಿಸಲಾಗುತ್ತಿದೆ. ಆದರೆ ಇದರ ಹಿಂದೆ ದೊಡ್ಡ ಸಂಚು ಇದೆ ಎಂದು ಪೋಲೀಸರು ತಿಳಿಸಿದ್ದಾರೆ.
ಈ ರೀತಿಯಾಗಿ ಲಕ್ಷಗಳನ್ನು ಪಡೆಯುವ ಭರವಸೆಯಿಂದ ಹಳೆಯ ರೂಪಾಯಿಯನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಿದ ಬೆಂಗಳೂರು ಮೂಲದ ಗೃಹಿಣಿ 1 ಲಕ್ಷ ರೂ.ಕಳಕೊಂಡಿರುವರು. ಅವರು ಆನ್‍ಲೈನ್ ಜಾಹೀರಾತನ್ನು ನೋಡಿ 1947 ರ ನಾಣ್ಯವನ್ನು ಮಾರಾಟಕ್ಕೆ ಇಟ್ಟರು. ಅದರ ಬೆಲೆ 10 ಲಕ್ಷ ರೂ. ಎಮದೆನ್ನಲಾಗಿತ್ತು. ವಂಚಕರು ಅವರನ್ನು ಸಂಪರ್ಕಿಸಿ ನಾಣ್ಯವನ್ನು 1 ಕೋಟಿ ರೂ.ಗೆ ಮಾರಾಟ ಮಾಡಬಹುದೇ ಎಂದು ಕೇಳಿದರು.
ಪ್ರಸ್ತಾಪವನ್ನು ನಂಬಿದ ಗೃಹಿಣಿ ಒಪ್ಪಂದವನ್ನು ದೃಢಪಡಿಸಿದರು ಮತ್ತು ಮಾರಾಟಗೊಂಡ ಲಭಿಸಬೇಕಾದ ಹಣಕ್ಕೆ ಅವರ ಬ್ಯಾಂಕ್ ಖಾತೆ ವಿವರಗಳನ್ನು ನೀಡಿದರು. ಅದೇ ಸಮಯದಲ್ಲಿ, ವಂಚಕರು 1 ಕೋಟಿ ರೂ.ಗಳನ್ನು ವರ್ಗಾಯಿಸಿದೆವು ಎಂದು ನಂಬಿಸಿ ಅವರು 1 ಲಕ್ಷ ರೂ.ಗೆ ಒಂದಷ್ಟು ಆದಾಯ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ಅವರು ಅದನ್ನು ನಂಬಿ ಹಲವಾರು ಲಕ್ಷ ರೂಪಾಯಿಗಳನ್ನು ಹಲವು ಬಾರಿ ಹಸ್ತಾಂತರಿಸಿದರು. ಆದರೆ, ಅವರು ಹಣವನ್ನು ಹಸ್ತಾಂತರಿಸಿದ ಬಳಿಕ ಇನ್ನೊಂದು ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ, ಅದು ಹಣವನ್ನು ಸುಲಿಗೆ ಮಾಡುವ ಬಲೆ ಎಂದು ತಿಳಿದುಬಂದಿದೆ ಎಂದು ಪೋಲೀಸರು ತಿಳಿಸಿದ್ದಾರೆ. ಆದ್ದರಿಂದ ಆನ್‍ಲೈನ್‍ನಲ್ಲಿ ಇಂತಹ ಹಗರಣಗಳು ಕಂಡುಬಂದರೆ ಜನರು ಬಲಿಯಾಗಬಾರದು. ಅದು ವಂಚನೆ ಎಂದು ಪೋಲೀಸರು ಎಚ್ಚರಿಸಿದ್ದಾರೆ.