ಕುಂಬಳೆ : ರಾಷ್ಟ್ರೀಯ ತುರ್ತು ಪರಿಸ್ಥಿತಿ ದಿನದ ಅಂಗವಾಗಿ, 1975 ರ ತುರ್ತು ಪರಿಸ್ಥಿತಿ ಪ್ರಥಮ ಬ್ಯಾಚ್ ನ ಹೋರಾಟಗಾರರು, 2 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದ ಕುಂಬಳೆ ದೇವಸ್ಥಾನ ಪರಿಸರದ ನಿವಾಸಿಯಾಗಿರುವ ಕೆ. ಮುರಳೀಧರ ರಾವ್ ಇವರಿಗೆ ಶುಕ್ರವಾರ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಮಣಿಕಂಠ ರೈ ಅವರು ಶಾಲು ಹಾಗೂ ಹಣ್ಣು ಹಂಪಲುಗಳನ್ನು ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಕುಂಬಳೆ ಘಟಕದ ಬಿಜೆಪಿ ಅಧ್ಯಕ್ಷ ಕೆ. ಸುಧಾಕರ್ ಕಾಮತ್,ಕುಂಬಳೆ ಪಂಚಾಯತಿನ ಅಭಿವೃದ್ಧಿ ಸ್ಟಾಯಿ ಸಮಿತಿ ಅಧ್ಯಕ್ಷೆ ಪ್ರೇಮಲತಾ, ಅರೋಗ್ಯ ಹಾಗೂ ಶಿಕ್ಷಣ ಸ್ಟಾಯಿ ಸಮಿತಿ ಅಧ್ಯಕ್ಷೆ ಪ್ರೇಮಾವತಿ, ಒಬಿಸಿ ಮೋರ್ಚಾ ಜಿಲ್ಲಾ ಸದಸ್ಯ ಶಶಿ ಕುಂಬಳೆ, ಪಂಚಾಯತಿ ಸದಸ್ಯರಾದ ಶೋಭಾ, ವಿದ್ಯಾ ಎನ್ ಪೈ ಉಪಸ್ಥಿತರಿದ್ದರು. ಪಂಚಾಯತಿ ಸದಸ್ಯ ಅಜಯ ನಾಯ್ಕ್ಕಾಪು ಸ್ವಾಗತಿಸಿ, ಸುಬ್ರಮಣ್ಯ ನಾಯ್ಕ್ ವಂದಿಸಿದರು.