ಕನ್ನಡ ಸಾಹಿತ್ಯ,ಸಾಂಸ್ಕ್ರತಿಕ ರಂಗದ ಮೇರು ಸಾಧಕ, ಇತ್ತೀಚೆಗೆ ನಮ್ಮನ್ನಗಲಿದ ನಾಡೋಜ ಡಾ.ಸಿದ್ದಲಿಂಗಯ್ಯ ಅವರಿಗೆ ನಾಡಿನ ಸಮಸ್ತ ಜನತೆಯ ಪರವಾಗಿ ಮಂಜೇಶ್ವರ ಗೋವಿಂದ ಪ್ಯೆ ಸ್ಮಾರಕ ಸಮಿತಿ ಹಾಗೂ ಅಪೂರ್ವ ಕಲಾವಿದರು ಕಾಸರಗೋಡು ಇವರು ಜಂಟಿಯಾಗಿ ಇದೀಗ ಮಂಜೇಶ್ವರದ ಗೋವಿಂದ ಪ್ಯೆ ಸ್ಮಾರಕ ಗಿಳಿವಿಂಡಿನಲ್ಲಿ ನುಡಿನಮನ ಕಾರ್ಯಕ್ರಮ ಆಯೋಜಿಸಿದೆ. ಗಣ್ಯರನೇಕರು ಭಾಗವಹಿಸುತ್ತಿದ್ದು, ಕಾರ್ಯಕ್ರಮದ ನೇರ ಪ್ರಸಾರವನ್ನು ಸಮರಸ ಸುದ್ದಿ ಒದಗಿಸುತ್ತಿದೆ. ವೀಕ್ಷಕರು ಸಮರಸಸುದ್ದಿಯ ಮೂಲಕ ಪೂರ್ತಿ ಕಾರ್ಯಕ್ರಮ ವೀಕ್ಷಿಸಬಹುದು.