HEALTH TIPS

ಸಿಲ್ವರ್‍ಲೈನ್ ಮತ್ತು ಪರಿಸರ ಅಂಶಗಳನ್ನು ವಿವರಿಸುವ ವೆಬ್ನಾರ್; ವಿಶ್ವ ಪರಿಸರ ದಿನದಂದು 'ಗ್ರೀನ್ ಸಿಗ್ನಲ್' ನೊಂದಿಗೆ ಕೆ-ರೈಲು

               ತಿರುವನಂತಪುರ: ತಿರುವನಂತಪುರ-ಕಾಸರಗೋಡು ಅರೆ-ಹೈಸ್ಪೀಡ್ ರೈಲು ಯೋಜನೆಯಾದ ಸಿಲ್ವರ್‍ಲೈನ್‍ನ 'ಪರಿಸರ ಅಂಶಗಳನ್ನು' ವಿವರಿಸಲು ಕೆ.ಆರ್.ಡಿ.ಸಿ.ಎಲ್. ಪರಿಸರ ದಿನಾಚರಣೆಯ ಅಂಗವಾಗಿ ಜೂನ್ 5 ರಂದು ವೆಬ್‍ನಾರ್ ನಡೆಸಲಿದೆ. 

                 ಕೇರಳ ರೈಲ್ವೆ ಅಭಿವೃದ್ಧಿ ನಿಗಮವು ಕೆ-ರೈಲ್ ಟಾಕ್ಸ್ ಎಂಬ ವೆಬ್ನಾರ್ ಸರಣಿಯನ್ನು ಆಯೋಜಿಸುತ್ತಿದ್ದು, ಸಿಲ್ವರ್‍ಲೈನ್- ನಾಡಿನ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಿದೆ. ಇದನ್ನು ಸಂಪೂರ್ಣವಾಗಿ ಹಸಿರು ಕಾರಿಡಾರ್ ಎಂದು ಹೆಸರಿಸಲಾಗಿದೆ. ಈ ವೆಬ್‍ನಾರ್ ಸರಣಿಯಲ್ಲಿ ಮೊದಲನೆಯದು ಸಿಲ್ವರ್‍ಲೈನ್‍ನ ಪರಿಸರ ಅಂಶಗಳನ್ನು ಚರ್ಚಿಸುವ "ಗ್ರೀನ್ ಸಿಗ್ನಲ್" ಎಂಬುದಾಗಿದೆ.

                ಇನ್ಸ್ಟಿಟ್ಯೂಟ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್ ಅಂಡ್ ಗವರ್ನೆನ್ಸ್ ಅಧ್ಯಕ್ಷ ಮತ್ತು ಯುಎನ್ಡಿಪಿ ಗ್ಲೋಬಲ್ ಪೆÇ್ರೀಗ್ರಾಂನ ಮಾಜಿ ಮುಖ್ಯಸ್ಥ ಜಾನ್ ಸ್ಯಾಮ್ಯುಯೆಲ್ ಶನಿವಾರ ಮಧ್ಯಾಹ್ನ 3: 30 ಕ್ಕೆ ವೆಬ್ನಾರ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪರಿಸರ ಮತ್ತು ಅಭಿವೃದ್ಧಿ ಕಾರ್ಯಕ್ರಮ ಕೇಂದ್ರದ ನಿರ್ದೇಶಕ ಡಾ. ವಿನೋದ್ ಆರ್, ಎಕ್ಸಿಕ್ಯುಟಿವ್ ಡೈರೆಕ್ಟರ್ ಡಾ.ಬಾಬು ಅಂಬಾಟ್, ಕೆ-ರೈಲ್ವೇ ಜನರಲ್ ಮ್ಯಾನೇಜರ್ ಜೋಸೆಫ್ ಕೆ.ಜೆ. ಮತ್ತು ಕೆ-ರೈಲ್ ಜಂಟಿ ಜನರಲ್ ಮ್ಯಾನೇಜರ್ ಮತ್ತು ಕಂಪನಿ ಕಾರ್ಯದರ್ಶಿ ಜಿ ಅನಿಲ್ ಕುಮಾರ್ ಮಾತನಾಡಲಿದ್ದಾರೆ.

                ವೆಬ್‍ನಾರ್‍ನಲ್ಲಿ ಭಾಗವಹಿಸಲು ಸಾರ್ವಜನಿಕರು http://bit.ly/krailtalks1 ನಲ್ಲಿ ನೋಂದಾಯಿಸಿಕೊಳ್ಳಬಹುದು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries