ಪಾಲಕ್ಕಾಡ್: ಮಾಸ್ಕ್ ಗಳನ್ನು ಸರಿಯಾಗಿ ಧರಿಸುವ ತಿಳುವಳಿಕೆಯ ಕೊರತೆಯಿಂದ ಮಾಸ್ಕ್ ಬಳಸುವಾಗ ಕಿರಿಕಿರಿಗಳು ಅನುಭವಕ್ಕೆ ಬರುತ್ತವೆ. ಈ ಪೈಕಿ ಕನ್ನಡ ಧರಿಸುವವರಿಗೆ ಹೆಚ್ಚು ಸಮಸ್ಯೆಗಳಾಗುತ್ತಿವೆ ಎಂದು ತಜ್ಞರು ಹೇಳುತ್ತಾರೆ.
ಪಾಲಕ್ಕಾಡ್ ಸೆಂಟ್ರಲ್ ಫೀಲ್ಡ್ ಡಿe ಟ್ರೀಚ್ ಬ್ಯೂರೋ ಆಯೋಜಿಸಿದ್ದ ವೆಬ್‍ನಾರ್‍ನಲ್ಲಿ ಭಾಗವಹಿಸಿದವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೊರೋನದ ಎರಡನೇ ಅಲೆಯಲ್ಲಿ ಮಾಸ್ಕ್ ಗಳನ್ನು ಹೇಗೆ ಧರಿಸಬೇಕೆಂಬುದರ ಬಗ್ಗೆ ಜ್ಞಾನವನ್ನು ನೀಡಲು ವೆಬ್ನಾರ್ ನ್ನು ಆಯೋಜಿಸಲಾಗಿತ್ತು. ಡಬಲ್ ಮಾಸ್ಕ್ ಧರಿಸುವುದರಿಂದ ಮಾತ್ರ ಲಕ್ಷ್ಯ ಪ್ರಾಪ್ತಿಯಾಗದು. ಅದನ್ನು ಸರಿಯಾಗಿ ಧರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ರೋಗನಿರೋಧಕ ವ್ಯವಸ್ಥೆಯ ಬಗ್ಗೆ ಸಂಶೋಧನೆ ನಡೆಸುತ್ತಿರುವ ಡಾ. ವಿ.ಎಂ.ಮನೋಜ್ ಕರೆ ನೀಡಿರುವರು. ಮಾರುಕಟ್ಟೆಯಲ್ಲಿ ಲಭಿಸುವ ಅಸುರಕ್ಷಿತ ಮಾಸ್ಕ್ ಗಳನ್ನು ಬಳಸದಂತೆ ಮನೋಜ್ ಎಚ್ಚರಿಸಿದ್ದಾರೆ.
ಕೊಚ್ಚಿ ಹೆರಿಟೇಜ್ ಅಧ್ಯಕ್ಷ ಅಡ್ವೊಕೇಟ್ ಜಯರಾಜ್ ಪಿ.ಎಸ್. ಮಾತನಾಡಿ, ವಿದ್ಯಾವಂತರು ಮತ್ತು ಮಾಸ್ಕ್ ನ ಮಹತ್ವದ ಬಗ್ಗೆ ತಿಳಿದಿರುವವರು ಕೂಡ ಅದನ್ನು ಸರಿಯಾಗಿ ಧರಿಸಲು ಹಿಂಜರಿಯುತ್ತಾರೆ ಎಂದು ಗಮನಸೆಳೆದರು.
ಎಲ್ಲರಲ್ಲೂ ಜಾಗೃತಿ ಇದ್ದರೂ ಮಾಸ್ಕ್ ಗಳನ್ನು ಸಮರ್ಪಕವಾಗಿ ಧರಿಸದ ಕಾರಣ ಹತ್ತಾರು ಜನರ ಮೇಲೆ ಕಾನೂನು ಕ್ರಮ ಜರುಗಿಸುತ್ತಿರುವುದು ದುರದೃಷ್ಟಕರ ಎಂದು ಹಾರ್ಟ್ ಅಂಡ್ ಹ್ಯಾಂಡ್ಸ್ ಅಧ್ಯಕ್ಷ ರಂಜಿತ್ ಕರುಣಾಕರನ್ ಹೇಳಿದ್ದಾರೆ. ಹಾರ್ಟ್ ಅಂಡ್ ಹ್ಯಾಂಡ್ಸ್ ಪ್ರಧಾನ ಕಾರ್ಯದರ್ಶಿ ಕೆ.ಕೆ.ಸುದೇವ್ ಕುನ್ನಮ್‍ವೀಟ್ಟಿಲ್ ಮತ್ತು ಕ್ಷೇತ್ರ ಪ್ರಚಾರ ಅಧಿಕಾರಿ ಎಂ ಸ್ಮಿಥಿ ಮಾತನಾಡಿದರು.